ಕಳಸ ಲೈವ್ ವರದಿ
ಕಳಸದ ಕೋಟೆಹೊಳೆ ಭದ್ರಾ ನದಿಯಲ್ಲಿ ಯುವಕನೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ತೋಟ ವೊಂದರಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಸೂರ್ಯ (೧೯) ಎಂಬ ಯುವಕ ಸಂಜೆ ಸುಮಾರು ೪.೩೦ರ ವೇಳೆ ಸ್ನಾನದ ಉದ್ದೇಶದಿಂದ ಭದ್ರಾ ನದಿಗೆ ಇಳಿದಾಗ ನೀರಿನ ಆಳಕ್ಕೆ ಸೆಳೆಯಲ್ಪಟ್ಟು ಮುಳುಗಿದ್ದಾನೆ ಎನ್ನಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಕಳಸ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಗಿದ್ದು, ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
