ಕಳಸ ಲೈವ್ ವರದಿ
ಕರ್ನಾಟಕ ಇತಿಹಾಸ ಅಕಾಡೆಮಿಯ 39ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗದಲ್ಲಿ ನವೆಂಬರ್ 8, 2025ರಂದು “ಕರ್ನಾಟಕ ಪುರಾತತ್ವ ರತ್ನ ಪ್ರೊ. ಅ. ಸುಂದರ” ಪುಸ್ತಕ ಬಿಡುಗಡೆಯಾಗಲಿದೆ
ಈ ಕೃತಿ ಡಾ. ಮೋಹನ ಆರ್ ಮತ್ತು ಕಳಸ ಡಾ. ಸುಪ್ರೀತ ಕೆ.ಎನ್ ಅವರ ಸಂಯುಕ್ತ ರಚನೆಯಾಗಿದ್ದು, ಪ್ರೊ. ಅ. ಸುಂದರ ಅವರ ಜೀವನ ಸಾಧನೆ, ಸಂಶೋಧನಾ ಕೊಡುಗೆಗಳು ಹಾಗೂ ಕರ್ನಾಟಕ ಸಂಸ್ಕೃತಿ–ಪುರಾತತ್ವ ಕ್ಷೇತ್ರದಲ್ಲಿ ಅವರ ಅಪಾರ ಸೇವೆಯನ್ನು ವಿವರವಾಗಿ ಪರಿಚಯಿಸುತ್ತದೆ.
ಪ್ರೊ. ಅ. ಸುಂದರ ಅವರು ಕಳೆದ ಏಳು ದಶಕಗಳಿಂದ ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಪುರಾತತ್ವ ಮತ್ತು ಸಂಸ್ಕೃತಿ ಅಧ್ಯಯನದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಮಹಾನ್ ಚೇತನರು. ಭಾರತದ ಭವ್ಯ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದ ಅಗ್ರಗಣ್ಯ ವಿದ್ವಾಂಸರಲ್ಲಿ ಇವರೂ ಒಬ್ಬರು. ಅವರ ಸಂಶೋಧನೆಗಳು ರಾಜ್ಯದ ಇತಿಹಾಸ ಅಧ್ಯಯನಕ್ಕೆ ಹೊಸ ದಿಕ್ಕು ತೋರಿಸಿದಂತಾಗಿದೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಜ್ಯದ ಹಲವು ಹಿರಿಯ ಇತಿಹಾಸಕಾರರು, ಪುರಾತತ್ವ ತಜ್ಞರು, ಅಕಾಡೆಮಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

