ಕಳಸ ಲೈವ್ ವರದಿ
ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರು ಕಳಸ, ತೋಟದೂರು, ಮರಸಣಿಗೆ, ಇಡಕಣಿ, ಸಂಸೆ, ಹೊರನಾಡುಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನೂರು ಕೋಟಿ ರೂಪಾಯಿ ಮೌಲ್ಯದ ರಸ್ತೆ, ಸೇತುವೆ ಹಾಗೂ ಮೂಲಸೌಕರ್ಯ ಕಾಮಗಾರಿಗಳು ಆರಂಭ, ಕೆಲವು ಪೂರ್ಣ, ಕೆಲವು ಪ್ರಗತಿಯಲ್ಲಿ, ಇನ್ನಷ್ಟು ಟೆಂಡರ್ ಹಂತದಲ್ಲಿವೆ.ನಯನ ಮೋಟಮ್ಮ ಅವರು ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಕಳಸ ತಾಲ್ಲೂಕು ಅಭಿವೃದ್ಧಿಯ ದೃಷ್ಟಿಯಿಂದ ಬೃಹತ್ ಮಟ್ಟದ ರಸ್ತೆ ಹಾಗೂ ಸೇತುವೆ ಕಾಮಗಾರಿಗಳನ್ನು ಕೈಗೊಂಡಿದ್ದು, ಗ್ರಾಮೀಣ ಮೂಲಸೌಕರ್ಯದಲ್ಲಿ ನೂತನ ಉಜ್ವಲತೆಯನ್ನು ತಂದಿದ್ದಾರೆ.
ಅದರ ಸಂಪೂರ್ಣ ಮಾಹಿತಿ ಇಲ್ಲಿದೆ
ಮುಗಿದಿರುವ ಕಾಮಗಾರಿಗಳು
ಕಳಸ ಗ್ರಾ ಪಂ ವ್ಯಾಪ್ತಿಯ ಎಡದಾಳು ರಸ್ತೆ ಅಭಿವೃದ್ದಿ 20 ಲಕ್ಷ, ಮಹಾವೀರ ರಸ್ತೆಗೆ ಇಂಟರ್ ಲಾಖ್ ಆಳವಡಿಕೆ 10 ಲಕ್ಷ, ಗೋರಿಮಕ್ಕೆ ರಸ್ತೆ ಅಭಿವೃದ್ದಿ 10ಲಕ್ಷ, ರೋಟರಿ ರಸ್ತೆ ಅಭಿವೃದ್ದಿ 5 ಲಕ್ಷ, ಕಳಸ ಗ್ರಾ ಪಂ ಹೊರನಾಡು ಶೃಂಗೇರಿ ಮುಖ್ಯರಸ್ತೆಯಿಂದ ಬಲಿಗೆ ಪಾರ್ಶ್ವನಾಥ ಬಸದಿಗೆ ರಸ್ತೆ ಅಭಿವೃದ್ದಿ 10ಲಕ್ಷ, ಕಳಸ ಗ್ರಾ ಪಂ ಮಹಾವೀರ ರಸ್ತೆ ಅಭಿವೃದ್ದಿ 10ಲಕ್ಷ, ಅಲ್ಪಸಂಖ್ಯಾತ ಇಲಾಖೆಯಿಂದ ಕಳಸ ಪಟ್ಟಣದ 5 ರಸ್ತೆ ಅಭಿವೃದ್ದಿ 1ಕೋಟಿ, ದೇವರಗುಡ್ಡ ಹಾಗೂ ಕಳಸ ಪಟ್ಟಣ ರಸ್ತೆ ಅಭಿವೃದ್ದಿ 75 ಲಕ್ಷ,
ತೋಟದೂರು ಗ್ರಾ ಪಂ ವ್ಯಾಪ್ತಿಯ ಕೇದಿಗೆಮನೆ ರಸ್ತೆ ಅಭಿವೃದ್ದಿ 70ಲಕ್ಷ, ತಲಗೋಡು-ನೆಲ್ಲಿಕೋಟ ರಸ್ತೆ ಅಭಿವೃದ್ದಿ 25ಲಕ್ಷ, ಕಗ್ಗನಹಳ್ಳ ರಸ್ತೆ ಅಭಿವೃದ್ದಿ 20 ಲಕ್ಷ, ತೋಟದೂರು ಗ್ರಾ ಪಂ ವಾಸನಕೂಡಿಗೆ ರಸ್ತೆ ಅಭಿವೃದ್ದಿ 10 ಲಕ್ಷ, ತಲಗೋಡು ಹಳ್ಳದಾಚೆ ತಾರಿಕೊಂಡ ರಸ್ತೆ ಅಭಿವೃದ್ದಿ 10ಲಕ್ಷ, ತನೋಡಿ ಕಾಳಿಪಾಲು ರಸ್ತೆ ಅಭಿವೃದ್ದಿ 10ಲಕ್ಷ,
ಸಂಸೆ ಗ್ರಾ ಪಂ ಕೆಳಕೊಡಿಗೆ ರಸ್ತೆ ಅಭಿವೃದ್ದಿ 10ಲಕ್ಷ, ಎಸ್ ಕೆ ಮೇಗಲ್ ಕಟ್ಟಿನಪಾಲ್ ರಸ್ತೆ ಅಭಿವೃದ್ದಿ40ಲಕ್ಷ, ವಾಟೆಹಳ್ಳ ರಸ್ತೆ ಅಭಿವೃದ್ದಿ 40ಲಕ್ಷ,
ಮರಸಣಿಗೆ ಗ್ರಾ ಪಂ ಈಶ್ವರ ದೇವಸ್ಥಾನ ರಸ್ತೆ ಅಭಿವೃದ್ದಿ 50 ಲಕ್ಷ, ಮೇಲ್ಪಾಲ್ ಹಡ್ಲುಗದ್ದೆ ರಸ್ತೆ ಅಭಿವೃದ್ದಿ 10 ಲಕ್ಷ, ಮೇಲ್ಪಾಲ್ ಹಡ್ಲುಗದ್ದೆ ರಸ್ತೆ ಅಭಿವೃದ್ದಿ ಲಕ್ಷ 10, ಮರಸಣಿಗೆ ಗ್ರಾ ಪಂ ಮೈದಾಡಿ-ಮೈತಲಖಾನ್ ರಸ್ತೆ ಅಭಿವೃದ್ದಿ 10ಲಕ್ಷ, ಬೈನೆಕೊಂಡ ರಸ್ತೆ ಅಭಿವೃದ್ದಿ 10ಲಕ್ಷ, ಕೆಳಮರಸಣಿಗೆ ಮುಳ್ಳಿನಕೊಂಡ ಕ್ರಶ್ಚಿಯನ್ ಕಾಲೋನಿ ರಸ್ತೆ ಅಭಿವೃದ್ದಿ 10ಲಕ್ಷ, ಮಲ್ಲೇಶನಗುಡ್ಡ ಬಾಳೆಹೊಳೆ ರಸ್ತೆಯಿಂದ ನಾಗನಮಕ್ಕಿ ಮೂಲಕ ಮರಸಣಿಗೆ ರಸ್ತೆಗೆ ಸಂಪರ್ಕ ರಸ್ತೆ ಅಭಿವೃದ್ದಿ ಕಾಮಗಾರಿ 2ಕೋಟಿ.
ಇಡಕಣಿ ಗ್ರಾ ಪಂ ವ್ಯಾಪ್ತಿಯ ಕೊತ್ತಂಬರಿ ಹಟ್ಲ ರಸ್ತೆ ಅಭಿವೃದ್ದಿ 50 ಲಕ್ಷ, ಹಿರೇಬೈಲ್-ಕೋರೆ ಮುಖ್ಯ ರಸ್ತೆಯಿಂದ ಲೂಹಿಸ್ ಮನೆಯಿಂದ ರಸ್ತೆ ಕಾಮಗಾರಿ 10ಲಕ್ಷ, ಬೂದಿಗುಂಡಿ ರಸ್ತೆ ಕಾಮಗಾರಿ 10ಲಕ್ಷ, ಯಳಂದೂರು ಕಿರು ಸೇತುವೆ ರಸ್ತೆ ಅಭಿವೃದ್ದಿ 50ಲಕ್ಷ.
ಆರಂಭವಾಗಬೇಕಾದ ಕಾಮಗಾರಿ
ಹೊರನಾಡು ಗ್ರಾ ಪಂ ವ್ಯಾಪ್ತಿಯ ಗೀ ತೋಟ ರಸ್ತೆ ಅಭಿವೃದ್ದಿ 10ಲಕ್ಷ, ಹೂವಿನಹಿತ್ಲು ರಸ್ತೆ ಅಭಿವೃದ್ದಿ 15 ಲಕ್ಷ, ಕೆಸವಿನಕೊಂಡ ರಸ್ತೆ ಅಭಿವೃದ್ದಿ 15ಲಕ್ಷ, ತುಂಬರ್ ಕೊಳಲು ರಸ್ತೆ ಅಭಿವೃದ್ದಿ 15ಲಕ್ಷ,
ಸಂಸೆ ಗ್ರಾ ಪಂ ಮೇಲ್ಮನೆಯಿಂದ ಹೊಸಮಠ ಬಿ ಕಲ್ಕೋಡು ಕಾರ್ಲೆ ರಸ್ತೆ 10ಲಕ್ಷ, ಸಂಪನೆ ರಸ್ತೆ ಅಭಿವೃದ್ದಿ 10ಲಕ್ಷ, ಉಳ್ಳುರು ಕೋರೆ ರಸ್ತೆ ಅಭಿವೃದ್ದಿ 10ಲಕ್ಷ, ತೋರಣಕಾಡು-ಕುಚಿಗೆರೆ-ರಸ್ತೆ ಅಭಿವೃದ್ದಿ 14.5ಲಕ್ಷ, ಕಲ್ಕೋಡು ಕಾರ್ಲೆ ಪ.ಜಾ/ಪ.ಪಂ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ದಿ 50ಲಕ್ಷ, ಸಂಸೆ ಎಳನೀರು ರಸ್ತೆ ಅಬಿವೃದ್ದಿ 80ಲಕ್ಷ.
ಇಡಕಣಿ ಗ್ರಾ ಪಂ ಹೆಮ್ಮಕ್ಕಿ-ಕಗ್ಗುಂಡಿ ಕೋರಣತೋಟ ರಸ್ತೆ ಅಭಿವೃದ್ದಿ 10ಲಕ್ಷ, ಹಿನಾರಿ-ಹಂದಿಹಡ್ಲು ರಸ್ತೆ ಅಭಿವೃದ್ದಿ 10 ಲಕ್ಷ, ಸಿಡ್ಲಾರ್ ಮಕ್ಕಿ ರಸ್ತೆ ಅಭಿವೃದ್ದಿ 10ಲಕ್ಷ, ಕೆ ಕೆಳಗೂರು ಕಾರಕ್ಕಿ ಹೊಸಗದ್ದೆ ರಸ್ತೆ ಅಭಿವೃದ್ದಿ 20ಲಕ್ಷ,
ಮರಸಣಿಗೆ ಕಂಬಗದ್ದೆ ಪ.ಪಂಗಡ ರಸ್ತೆ ಅಭಿವೃದ್ದಿ 25ಲಕ್ಷ, ಮರಸಣಿಗೆ ಗಿಡ್ಡನಪಾಲ್ ಹಾಗು ಶೆಟ್ಟಿಕೆರೆ ಪ.ಪಂಗಡ ರಸ್ತೆ ಅಭಿವೃದ್ದಿ25ಲಕ್ಷ. ಗಾಳಿಗಂಡಿ-ಹಾಲೆಕೊಟ್ಟಿಗೆ ರಸ್ತೆ ಅಭಿವೃದ್ದಿ 15ಲಕ್ಷ,
ತೋಟದೂರು ಹಾಲ್ಗೋಡು ಪ, ಪಂಗಡದ ಪೈಪ್ ಲೈನ್ ಕಾಮಗಾರಿ 10ಲಕ್ಷ, ಶಂಕರಕುಡಿಗೆ ರಸ್ತೆ ಅಭಿವೃದ್ದಿ 20.77ಲಕ್ಷ, ತಲಗೋಡು ಹಳ್ಳದಾಚೆ ತಾರಿಕೊಂಡ ರಸ್ತೆ ಅಭಿವೃದ್ದಿ 10ಲಕ್ಷ,
ಕಳಸ ಬಲಿಗೆ ಜಾರಕಿಬೈಲ್ ರಸ್ತೆ ಅಭಿವೃದ್ದಿ 10ಲಕ್ಷ, ಕಳಸ-ಕಳ್ಕೋಡು ರಸ್ತೆ ಅಭಿವೃದ್ದಿ 2ಕೋಟಿ, ಗಂಗಾಮೂಲ-ಕೊಟ್ಟಿಗೆಹಾರ ರಸ್ತೆ ರಾ.ಹೆ.66 ಸರಪಳಿ 25.50-28.00 ಕಿ.ಮೀ ವರೆಗೆ ರಸ್ತೆ ಅಭಿವ್ರುದ್ದಿ.( ನೆಲ್ಲಿಬೀಡು) 5ಕೋಟಿ, ಗಂಗಾಮೂಲ-ಕೊಟ್ಟಿಗೆಹಾರ ರಸ್ತೆ ರಾ.ಹೆ.66 ಸರಪಳಿ 33.00-37.00 ಕಿ.ಮೀ ವರೆಗೆ ರಸ್ತೆ ಅಭಿವ್ರುದ್ದಿ. (ಸಂಸೆ) 2 ಕೋಟಿ, ಬಾಳೂರು ಹ್ಯಾಂಡ್ ಪೊಸ್ಟ್ ರಸ್ತೆ ರಾ.ಹೆ 106 ರ ಕಿ.ಮೀ 18.50-21.00 ವರೆಗೆ ರಸ್ತೆ ಅಬಿವೃದ್ದಿ ( ಮರಸಣಿಗೆ-ಹಿರೇಬೈಲ್) ಹಿರೇಬೈಲ್ -ಮರಸಣಿಗೆ 2ಕೋಟಿ, ಕೊಟ್ಟಿಗೆಹಾರ ಗಂಗಾಮೂಲ ರಾ.ಹೆ 66 ರ ಕಿ.ಮೀ 74 -75.50 ವರೆಗೆ ರಸ್ತೆ ಅಬಿವೃದ್ದಿ (ಗಬ್ಗಲ್) 1ಕೋಟಿ, ಕೊಟ್ಟಿಗೆಹಾರ- ಗಂಗಾಮೂಲ ರಸ್ತೆ ರಾ. ಹೆ 66 ರ ಕಿ.ಮೀ 58.00 ರಲ್ಲಿ ಸೇತುವೆ ಅಭಿವೃದ್ದಿ (ಕಗ್ಗನಹಳ್ಳ ಬಳಿ) 3ಕೋಟಿ 50ಲಕ್ಷ, ಕೊಟ್ಟಿಗೆಹಾರ-ಗಂಗಾಮೂಲ ರಸ್ತೆ ರಾ. ಹೆ 66 ರ ಕಿ.ಮೀ 64.10 ರಲ್ಲಿ ಸೇತುವೆ ಅಭಿವೃದ್ದಿ (ಮಹಲ್ಗೋಡು ಬಳಿ) 3ಕೋಟಿ, ಕಳಸ ಗ್ರಾ. ಪಂ ವ್ಯಾಪ್ತಿಯ ಹೆಬ್ಬಾಳೆ ಸೇತುವೆ ಹತ್ತಿರ ಭದ್ರ ನದಿಗೆ ಸೇರವ ಉಪನದಿಗೆ ಕಿರು ಸೇತುವೆ ನಿರ್ಮಾಣ 50 ಲಕ್ಷ, ಗಂಗಾಮೂಲ-ಕೊಟ್ಟಿಗೆಹಾರ ರಸ್ತೆ 23.08 ಕಿ.ಮೀ ನಲ್ಲಿ ಹೊಸ ಸೇತುವೆ ನಿರ್ಮಾಣ. (ಕುದುರೆಮುಖ ಮುಳುಗು ಸೇತುವೆ) 2ಕೋಟಿ 50ಲಕ್ಷ
ಪ್ರಗತಿಯಲ್ಲಿರುವ ಕಾಮಗಾರಿ
ಕಳಸ ರಸ್ತೆಯಿಂದ ಮರಸಣಿಗೆ ಗಾಳಿಗಂಡಿ ತೊಡ್ಲು ಮಾರ್ಗವಾಗಿ ಕುದರೆಮುಖ-ಕಳಸ ರಸ್ತೆಗೆ ಸಂಪರ್ಕ ರಸ್ತೆ 2ಕೋಟಿ, ದೇವರಮನೆ-ಮುಳ್ಳೋಡಿ ರಸ್ತೆ ಅಭಿವೃದ್ದಿ 5ಕೋಟಿ, ಹಿರೇಬೈಲ್ ಗ್ರಾಮದಲ್ಲಿ ಹೊಸ ಸಮುದಾಯ ಭವನ ನಿರ್ಮಾಣ 33ಲಕ್ಷ, ತೋಟದೂರು ಪ.ಜಾತಿ ಕಾಲೋನಿ ರಸ್ತೆ ಅಭಿವೃದ್ದಿ ಕಾಮಗಾರಿ 15ಲಕ್ಷ, ಕಳಸ ನೂತನ ತಾಲ್ಲೂಕು ಕಚೇರಿ ನಿರ್ಮಾಣ 5ಕೋಟಿ, ಗಂಗಾಮೂಲ ಪೊಸ್ಟ್ ರಸ್ತೆ ರಾ.ಹೆ 66 ರ ಕಿ.ಮೀ 10-18.5 ವರೆಗೆ ರಸ್ತೆ ಅಬಿವೃದ್ದಿ ( ಕುದುರೆಮುಖ) 6ಕೋಟಿ,
ಟೆಂಡರ್ ಹಂತದಲ್ಲಿರುವ ಕಾಮಗಾರಿಗಳು
ನೆಲ್ಲಿಬೀಡು ಕಟ್ರೆಮನೆ ಸೇತುವೆ ಹಾಗೂ ರಸ್ತೆ ನಿರ್ಮಾಣ 17ಕೋಟಿ 50ಲಕ್ಷ, ಕಗ್ಗನಹಳ್ಳ ಬಳಿ ತೂಗು ಸೇತುವೆ ಹಾಗೂ ರಸ್ತೆ ನಿರ್ಮಾಣ 9ಕೋಟಿ, ಹೊರನಾಡು-ಬಾಳೂರು ಹ್ಯಾಂಡ್ ಪೊಸ್ಟ್ ರಸ್ತೆ ರಾ.ಹೆ 106 ರ ಕಿ.ಮೀ 18.50-21.00 ವರೆಗೆ ರಸ್ತೆ ಅಬಿವೃದ್ದಿ ಹೊರನಾಡು ನಿಂದ ಮರಸಣಿಗೆ 5ಕೋಟಿ, ಮುನ್ನುರಪಾಲ್ ರಸ್ತೆ ಅಭಿವೃದ್ದಿ 20ಲಕ್ಷ, ಮರಸಣಿಗೆ ಗ್ರಾ. ಪಂ ವ್ಯಾಪ್ತಿಯ ದೇವಸ್ಥಾನದಿಂದÀ ಮುಂದುವರೆದ ರಸ್ತೆ ಕಾಮಗಾರಿ 20ಲಕ್ಷ ತೋಟದೂರು ಗ್ರಾ. ಪಂ ವ್ಯಾಪ್ತಿಯ ಎಸ್ಸಿ ಕಾಲೋನಿ ರಸ್ತೆ ಅಭಿವೃದ್ದಿ 20ಲಕ್ಷ, ನಾಗಸಂಪಿಗೆಮಕ್ಕಿ ರಸ್ತೆ ಅಭಿವೃದ್ದಿ 20ಲಕ್ಷ, ಈಚಲುಗುಡ್ಡ ರಸ್ತೆ ಅಭಿವೃದ್ದಿ 20ಲಕ್ಷ, ಕಲ್ಗೋಡು ರಸ್ತೆ ಅಭಿವೃದ್ದಿ 20ಲಕ್ಷ, ಕೆಸವಿನಕೊಂಡ ರಸ್ತೆ ಅಭಿವೃದ್ದಿ 20ಲಕ್ಷ.
