

ಕಳಸ ಲೈವ್ ವರದಿ
ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಳಸದ ಪ್ರತಿಭಾವಂತ ಕ್ರೀಡಾಪಟು ಮಾನ್ವಿ ವಿ. ಶೆಟ್ಟಿ ಮತ್ತೊಮ್ಮೆ ಕಳಸದ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ. ಮೈಸೂರಿನ ಆರ್.ವಿ ವಿಶ್ವವಿದ್ಯಾನಿಲಯದಲ್ಲಿ ನಡೆದ ರಾಜ್ಯಮಟ್ಟದ ಯು–19 ಬಾಲಕಿಯರ ವಿಭಾಗದ ರಿಲೆ ಓಟದಲ್ಲಿ ಭಾಗವಹಿಸಿದ ಮಾನ್ವಿ ಶೆಟ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯ ಚಾಂಪಿಯನ್ ಗೌರವ ಗಳಿಸಿದ್ದಾರೆ.
ಮಾನ್ವಿ ಶೆಟ್ಟಿ ಮೊದಲು ಕಳಸ ಜೆ.ಇ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೂ ಕ್ರೀಡಾಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದ್ದರು. ಹಲವಾರು ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಅವರು ಭಾಗವಹಿಸಿ ಕಳಸದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಮರಸಣಿಗೆಯ ವಿಠಲ ಶೆಟ್ಟಿ ಮತ್ತು ಶಾಂತಲಾ ಶೆಟ್ಟಿಯವರ ಪುತ್ರಿಯಾದ ಮಾನ್ವಿ ಶೆಟ್ಟಿ ಪ್ರಸ್ತುತ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

