ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಮರಸಣಿಗೆ ಮಕ್ಕಿತಲೆ ದಿ| ಧರಣೇಂದ್ರಯ್ಯನವರ ಪತ್ನಿ ಪದ್ಮಿನಿಯಮ್ಮ (೮೨) ಅವರು ಮಂಗಳವಾರ ಬೆಳಗ್ಗಿನ ಜಾವ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಕೆಲಕಾಲದಿಂದ ಬಳಲುತ್ತಿದ್ದ ಅವರು ಬೆಳಗ್ಗಿನ ಜಾವ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದರು.
ಮೃತರು ಮಕ್ಕಳಾದ ವರ್ಧಮಾನಯ್ಯ, ಆರ್.ಕೆ. ಬ್ರಹ್ಮದೇವ, ಮೂವರು ಪುತ್ರಿಯರು ಸೇರಿದಂತೆ ಮೊಮ್ಮಕ್ಕಳು ಮತ್ತು ಮರಿ ಮಕ್ಕಳನ್ನು ಅಗಲಿದ್ದಾರೆ.
ಮಂಗಳವಾರ ಮಧ್ಯಾಹ್ನ ಮಕ್ಕಿತಲೆಯಲ್ಲಿ ಅಂತ್ಯಕ್ರೀಯೆ ನೆರವೇರಿಸಲಾಯಿತು. ತಾಲ್ಲೂಕಿನ ನೂರಾರು ಮಂದಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
