
ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿಯು ತನ್ನ ವ್ಯಾಪ್ತಿಯಲ್ಲಿನ ನೈರ್ಮಲ್ಯವನ್ನು ಕಾಪಾಡಲು ಮತ್ತು ತ್ಯಾಜ್ಯ ವಿಲೇವಾರಿಯನ್ನು ವ್ಯವಸ್ಥಿತಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಪತ್ತೆಯಾದ ಅವ್ಯವಸ್ಥಿತ ಕಸ ವಿಲೇವಾರಿಯನ್ನು ಗಮನಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.
ಗ್ರಾಮದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಅಂಶಗಳನ್ನು ಕಡ್ಡಾಯಗೊಳಿಸಲಾಗಿದೆ. ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸುವುದು ಕಡ್ಡಾಯ. ಪಂಚಾಯಿತಿಯಿAದ ನೀಡಲಾದ ಕಸದ ಬಕೆಟ್ಗಳಲ್ಲೇ ಕಸವನ್ನು ಸಂಗ್ರಹಿಸಬೇಕು. ಒಂದು ವೇಳೆ ಬಕೆಟ್ ಇಲ್ಲದಿದ್ದಲ್ಲಿ, ಮಾಲೀಕರೇ ಸ್ವಂತವಾಗಿ ಖರೀದಿಸಿ ಕಸ ಸಂಗ್ರಹಿಸತಕ್ಕದ್ದು. ಅಂಗಡಿ ಮತ್ತು ಹೋಟೆಲ್ಗಳ ಕಸವನ್ನು ರಸ್ತೆಗೆ ಅಥವಾ ಚರಂಡಿಗೆ ಎಸೆಯುವುದು ಶಿಕ್ಷಾರ್ಹ ಅಪರಾಧ.ಸಂಗ್ರಹಿಸಿದ ಕಸವನ್ನು ಪಂಚಾಯಿತಿಯ ‘ಸ್ವಚ್ಛ ವಾಹಿನಿ’ (ಕಸದ ಗಾಡಿ) ಬಂದಾಗ ಮಾತ್ರ ಅದಕ್ಕೆ ನೀಡಬೇಕು.
ಪಂಚಾಯಿತಿಯ ಈ ಸೂಚನೆಯನ್ನು ಪಾಲಿಸದಿದ್ದಲ್ಲಿ, ದಿನಾಂಕ: 12/01/2026 ರಿಂದ ಜಾರಿಗೆ ಬರುವಂತೆ ಪ್ರತಿ ಉಲ್ಲಂಘನೆಗೆ 500/- ರೂ.ಗಳ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
