ಕಳಸ ಲೈವ್ ವರದಿ
ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಹಾಗೂ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಚಾರಣ ಪಥಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ದಿನಾಂಕ 14-01-2026 ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಈ ಕೆಳಕಂಡ ಚಾರಣ ಪಥಗಳು ಚಾರಣಿಗರಿಗೆ ಲಭ್ಯವಿರುವುದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ) ತಿಳಿಸಿದ್ದಾರೆ.
ಬೇಸಿಗೆ ಕಾಲ ಆರಂಭವಾಗುತ್ತಿರುವುದರಿ0ದ ಕಾಡಿನಲ್ಲಿ ಒಣಗಿದ ಎಲೆಗಳು ಹೆಚ್ಚಾಗಿರುತ್ತವೆ. ಚಾರಣಿಗರಿಂದ ಅಚಾತುರ್ಯದಿಂದ ಕಾಳ್ಗಿಚ್ಚು ಸಂಭವಿಸುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.ಒಣ ಹವಾಮಾನ ಮತ್ತು ಕಾಳ್ಗಿಚ್ಚಿನ ಸಾಧ್ಯತೆಯಿಂದಾಗಿ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅರಣ್ಯ ಇಲಾಖೆಯ ಪಟ್ಟಿಯಂತೆ ಗಂಗಡಿಕಲ್ ಚಾರಣ, ಕುದುರೆಮುಖ ಚಾರಣ, ಕುರಿಂಜಾಲು ಚಾರಣ, ವಾಲಿಕುಂಜ ಚಾರಣ, ನರಸಿಂಹಪರ್ವತ, ಕೊಡಚಾದ್ರಿ , ಬಂಡಾಜೆ – ಫಾಲ್ಸ್ , ನೇತ್ರಾವತಿ ಚಾರಣ ನಿರ್ಬಂಧಿಸಲಾಗಿದೆ.
ಈ ಪ್ರದೇಶಗಳಿಗೆ ಪ್ರವೇಶಿಸದಂತೆ ಚಾರಣಿಗರಿಗೆ ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
