ಕಳಸ ಲೈವ್ ವರದಿ
ಮಲೆನಾಡಿನ ಹೆಬ್ಬಾಗಿಲು ಕಳಸ ಪಟ್ಟಣದಲ್ಲಿ ಇದೇ ತಿಂಗಳ 11ರ ಭಾನುವಾರ ಹಿಂದೂ ಸಮಾಜದ ಏಕತೆ ಮತ್ತು ಜಾಗೃತಿಯ ಸಂಕೇತವಾಗಿ ಅದ್ದೂರಿ ‘ಹಿಂದೂ ಸಮಾಜೋತ್ಸವ’ ಆಯೋಜನೆಗೊಂಡಿದೆ. ಪಟ್ಟಣದಾದ್ಯಂತ ಈಗಾಗಲೇ ಕೇಸರಿ ಬಂಟಿAಗ್ಸ್ ಹಾಗೂ ಬ್ಯಾನರ್ಗಳು ರಾರಾಜಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಅಂದು ಮಧ್ಯಾಹ್ನ 3:00 ಗಂಟೆಗೆ ಕಳಸೇಶ್ವರ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆಗೆ ಚಾಲನೆ ಸಿಗಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಲಿರುವ ಈ ಮೆರವಣಿಗೆಯಲ್ಲಿ ಮಕ್ಕಳಿಂದ ಕುಣಿತ ಭಜನೆ, ರಾಧಾ-ಕೃಷ್ಣ ಹಾಗೂ ದೇಶದ ಮಹಾಪುರುಷರ ಆಕರ್ಷಕ ವೇಷಭೂಷಣಗಳು, ಸಾಂಸ್ಕೃತಿಕ ಹಿರಿಮೆ ಬಿಂಬಿಸುವ ವಿವಿಧ ಟ್ಯಾಬ್ಲೋಗಳು ಮತ್ತು ಸ್ಥಳೀಯ ಕಲಾತಂಡಗಳ ಪ್ರದರ್ಶನ ಇರಲಿದೆ.
ಸಂಜೆ 5:00 ಗಂಟೆಗೆ ಪಟ್ಟಣದ ದುರ್ಗಾ ಮಂಟಪದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಖ್ಯಾತ ಸಾಮಾಜಿಕ ಕಾರ್ಯಕರ್ತರಾದ ಯಾದವಕೃಷ್ಣ ಅವರು ಮಾಡಲಿದ್ದಾರೆ.
ಜಿ. ಭೀಮೇಶ್ವರ ಜೋಷಿ (ಧರ್ಮಕರ್ತರು, ಹೊರನಾಡು ಕ್ಷೇತ್ರ) ರಘುನಾಥ (ಅಧ್ಯಕ್ಷರು, ಸಮಾಜೋತ್ಸವ ಆಯೋಜನಾ ಸಮಿತಿ) ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಲಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು, ಕಳಸ ಪಟ್ಟಣವು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಂಪೂರ್ಣ ಸಜ್ಜಾಗಿದೆ
