ಕಳಸ ಲೈವ್ ವರದಿ
ಇಲ್ಲಿನ ಪ್ರಸಿದ್ಧ ಶ್ರೀ ಕಲಶೇಶ್ವರ ದೇವಸ್ಥಾನದ ಸಮೀಪವಿರುವ ‘ಪವರ್ ಪಾಯಿಂಟ್ ಬ್ಯಾಗ್ ಹೌಸ್’ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಮಾರಾಟವನ್ನು ಹಮ್ಮಿಕೊಂಡಿದೆ. ಮೇ 20ರಿಂದ ಜೂನ್ 30ರವರೆಗೆ ನಡೆಯಲಿರುವ ಈ ಸೀಮಿತ ಅವಧಿಯ ಮಾರಾಟ ಮೇಳದಲ್ಲಿ, ಅಂಗಡಿಯಲ್ಲಿ ಲಭ್ಯವಿರುವ ಪ್ರತಿಯೊಂದು ಬ್ಯಾಗ್ ಮೇಲೂ ಭರ್ಜರಿ ಶೇ. 30 ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಹೊಸ ಶೈಕ್ಷಣಿಕ ವರ್ಷದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ವಿಭಿನ್ನ ವಿನ್ಯಾಸಗಳ ಹಾಗೂ ಮಕ್ಕಳ ಇಷ್ಟದ ಬಣ್ಣಗಳ ಸ್ಕೂಲ್ ಬ್ಯಾಗುಗಳನ್ನು ಇಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗಿದೆ. ಇದರೊಂದಿಗೆ ಮಹಿಳೆಯರಿಗಾಗಿ ಟ್ರೆಂಡಿ ಲೇಡಿಸ್ ಬ್ಯಾಗ್ಸ್, ವ್ಯಾನಿಟಿ ಬ್ಯಾಗ್ಸ್ ಹಾಗೂ ದೂರದ ಪ್ರಯಾಣಕ್ಕೆ ಸೂಕ್ತವಾದ ಗಟ್ಟಿಮುಟ್ಟಾದ ವಿವಿಧ ಮಾದರಿಯ ಲಗೇಜ್ ಬ್ಯಾಗುಗಳ ಬೃಹತ್ ಸಂಗ್ರಹವೇ ಇಲ್ಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬ್ಯಾಗುಗಳಿಗೆ ಹೆಸರುವಾಸಿಯಾಗಿರುವ ‘ಪವರ್ ಪಾಯಿಂಟ್ ಬ್ಯಾಗ್ ಹೌಸ್’, ಗ್ರಾಹಕರಿಗೆ ಕೇವಲ ರಿಯಾಯಿತಿ ಮಾತ್ರವಲ್ಲದೆ ತಾನು ಮಾರಾಟ ಮಾಡುವ ಬ್ಯಾಗುಗಳಿಗೆ ಒಂದು ವರ್ಷದ ಗ್ಯಾರಂಟಿ/ವಾರAಟಿ ಸೌಲಭ್ಯವನ್ನೂ ಸಹ ನೀಡುತ್ತಿದೆ. ಗುಣಮಟ್ಟ ಹಾಗೂ ನಂಬಿಕೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಗ್ರಾಹಕರು ಈ ಸುವರ್ಣಾವಕಾಶದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ.
ಹೆಚ್ಚಿನ ವಿವರಗಳಿಗಾಗಿ: ಗ್ರಾಹಕರು ನೇರವಾಗಿ ಅಂಗಡಿಗೆ ಭೇಟಿ ನೀಡಬಹುದು ಅಥವಾ ಮೊಬೈಲ್ ಸಂಖ್ಯೆ: 9483711316 ಅನ್ನು ಸಂಪರ್ಕಿಸಬಹುದಾಗಿದೆ

