

ಕಳಸ ಲೈವ್ ವರದಿ
2024ನೇ ಸಾಲಿನ ಜೆಸಿಐ ಭಾರತ ವಲಯ 14 ರ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ ನ ನಿರ್ದೇಶಕರಾಗಿ ಕೆ.ಸಿ.ಮಹೇಶ್ ಮತ್ತು ಜೆಸಿಐ ವಲಯ 14ರ ಕಾರ್ಯಕ್ರಮ ವಿಭಾಗದ ನಿರ್ದೇಕರಾಗಿ ಪ್ರಶಾಂತ್ ಹೆಚ್.ಆರ್ ಆಯ್ಕೆಯಾಗಿದ್ದಾರೆ.
ಕೆ.ಸಿ.ಮಹೇಶ್ 2014ರಲ್ಲಿ ಕಳಸ ಜೆಸಿಐ ಗೆ ಸದಸ್ಯರಾಗಿ ಸೇರಿಕೊಂಡು 2020ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, 2024ನೇ ಜೆಸಿಐ ಭಾರತ ವಲಯ 14ರ ಜೆಸಿಐ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ ನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಹೆಚ್.ಆರ್.ಪ್ರಶಾಂತ್ 2021ರಲ್ಲಿ ಕಳಸ ಜೆಸಿಐ ಸದಸ್ಯರಾಗಿ,2022ರಲ್ಲಿ ಅಧ್ಯಕ್ಷರಾಗಿ 2023ರಲ್ಲಿ ಮೊದಲ ಪಾಸಿಟೀವ್ ವಲಯ ಉಪಧ್ಯಕ್ಷರಾಗಿ, 2024ನೇ ಸಾಲಿಗೆ ವಲಯದ ಕಾರ್ಯಕ್ರಮ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಹನ್ನೆರಡು ವರ್ಷಗಳ ಹಿಂದೆ ಕಳಸದಲ್ಲಿ ಜೆಸಿಐ ಸಂಸ್ಥೆ ಹುಟ್ಟಿಕೊಂಡು ಇದೀಗ ಕಳಸ ಜೆಸಿಐ ಸದಸ್ಯರು ವಲಯ ಮಟ್ಟದಲ್ಲೂ ವಿವಿದ ಹುದ್ದೆಗಳನ್ನು ಪಡೆದುಕೊಂಡು ರಾಜ್ಯ ಹೊರರಾಜ್ಯದಲ್ಲೂ ಹೆಸರು ಮಾಡುತ್ತಿರುವುದು ಶ್ಲಾಘನೀಯ.



