
ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವಸ್ಥಾನದ ದ್ವಾರಪಾಲಕ ಬಾಗಿಲಿನ ಚೌಕಟ್ಟಿಗೆ ದಿ.ಶ್ರೀಮತಿ ಬೆಳ್ಳಮ್ಮ ದಿ.ಶ್ರೀ ಹೆಚ್. ಧರಣೇ ಗೌಡರು ಇವರ ಸ್ಮರಣಾರ್ಥ ಶ್ರೀಮತಿ ಸರೋಜಮ್ಮ ಶ್ರೀ ಹೆಚ್.ಡಿ.ಭೋಜೇಗೌಡ್ರು ಮತ್ತು ಕಟುಂಬಸ್ಥರು ಹೊಸೂರು ಇವರು ರಜತ ಕವಚ ಸಮರ್ಪಣೆ ಮಾಡಿದರು.
ಬುಧವಾರ ಬೆಳಿಗ್ಗೆ ಕಲಶೇಶ್ವರನಿಗೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ರಚತ ಕವಚವನ್ನು ಸಮರ್ಪಿಸಲಾಯಿತು.
ಅಲ್ಲದೆ ಕಳಸ ಕಲಶೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮೊದಲನೇ ದಿನ ಗಣಪತಿಪೂಜೆ, ಅಂಕುರಾರ್ಪಣ ನಡೆಯಿತು.
ಈ ಸಂದರ್ಭದಲ್ಲಿ ರಜತ ಕವಚ ದಾನಿಗಳಾದ ಹೆಚ್.ಡಿ.ಭೋಜೇಗೌಡ್ರು, ಲಕ್ಷ್ಮಣ ಗೌಡ, ವೆಂಕಟೇಶ ಗೌಡ, ರಾಮದಾಸ್ ಗೌಡ, ಗಗನ್ ಗೌಡ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯರಾದ ಕೆ.ಕೆ.ಬಾಲಕೃಷ್ಣ ಭಟ್, ಸತೀಶ್ ಕಲ್ಲಾನೆ ಇತರರು ಇದ್ದರು.




