ಕಳಸ ಲೈವ್ ವರದಿ
ಕಳಸ ತಾಲೂಕನಾಧ್ಯಂತ ಸಾದಾರಣ ಮಳೆ ಮುಂದುವರೆದಿದ್ದು, ಮಳೆಯ ಪರಿಣಾಮ ಕವನಳ್ಳ ಗಣೇಶ ಎಂಬುವವರ ಮನೆ ಮೇಲ್ಚಾವಣಿ ಕುಸಿದಿದೆ.
ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವನಳ್ಳ ಗಣೇಶ ಅವರ ಮನೆಯ ಮೇಲ್ಚಾವಣಿ ಕುಸಿದಿದ್ದು ಅಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಗಣೇಶ ಒಬ್ಬರೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಮೇಲ್ಚಾವಣಿ ಕುಸಿಯುವ ಸಂದರ್ಭದಲ್ಲಿ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.


