
ಕಳಸ ಲೈವ್ ವರದಿ
ಬಲ್ಲಾಳರಾಯನದುರ್ಗ, ಬಂಡಾಜೆ ಫಾಲ್ಸ್ ಅರಣ್ಯ ಪ್ರದೇಶದಲ್ಲಿ ಚಾರಣ ಚಟುವಟಿಕೆ ನಡೆಯುತ್ತಿದ್ದು, ಮಳೆ ಹೆಚ್ಚಾದ ಕಾರಣ 2024ರ ಜುಲೈ 15ರಿಂದ 2024 ಸೆಪ್ಟಂಬರ್ 30ರ ವರೆಗೆ ತಾತ್ಕಾಲಿಕವಾಗಿ ಅರಣ್ಯ ಇಲಾಖೆ ನಿರ್ಬಂಧಿಸಿದೆ.
ಪ್ರಸ್ತುತ ಮಳೆ ಜಾಸ್ತಿ ಇರುವುದರಿಂದ ಗುಡ್ಡಕಾಡು ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಾಗಿರುತ್ತದೆ.ಇದರಿಂದಾಗಿ ಚಾರಣಕ್ಕೆ ಹಾಗೂ ಚಾರಣಿಗರ ಜೀವಕ್ಕೆ ಅಪಾಯ ಉಂಟಾಗಬಹುದಾದ್ದರಿಂದ ಮೇಲ್ಕಂಡ ಅರಣ್ಯ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಚಾರಣಕ್ಕೆ ಹೋಗುವುದನ್ನು ತಾತ್ಕಾಲಿಕವಾಗಿ ನಿರ್ಬಧಿಸಲಾಗಿದೆ ಎಂದು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಧಿಕೃತ ಜ್ಞಾಪನಾ ಪತ್ರದಲ್ಲಿ ತಿಳಿಸಿದ್ದಾರೆ.




