ಕಳಸ ಲೈವ್ ವರದಿ
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುಂಟಿಕಾನ, ಮಂಗಳೂರು, ಕಾವೇರಿ ಸ್ಮಾರಕ ಆಸ್ಪತ್ರೆ ಕಳಸ, ಕಳಸ ಯುವಕ ಸಂಘ (ರಿ.) ಕಳಸ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
2024ರ ನವಂಬರ್ 17ರ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕಳಸ ಕಾವೇರಿ ಆಸ್ಪತ್ರೆ ಆವರಣದಲ್ಲಿ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ ಭಾಗವಹಿಸಿ ಕೆಳಕಂಡ ಸದುಪಯೋಗ ಪಡೆದುಕೊಳ್ಳಿ

ಕ್ಯಾನ್ಸರ್ ತಜ್ಞರು
*ಸ್ತನದಲ್ಲಿ ಗೆಡ್ಡೆ ಅಥವಾ ಕಿಬ್ಬೊಟ್ಟೆಯಲ್ಲಿ ಮಾಂಸದ ಮುದ್ದೆಯಂತಹ ಊತ. ಮುಟ್ಟಿನ ಬಳಿಕ ದೀರ್ಘಕಾಲದ ರಕ್ತಸ್ರಾವ ಮತ್ತು ಬಿಳಿ ಮುಟ್ಟು. ಆಗಾಗ ಮರುಕಳಿಸುವ ಕೆಮ್ಮು, ಒರೆಟು ಧ್ವನಿ, ಆಹಾರ ನುಂಗಲು ಕಷ್ಟವಾಗುವುದು. ಕೆನ್ನೆ / ನಾಲಿಗೆಯಲ್ಲಿ ಗುಣವಾಗದ ಹುಣ್ಣು ಅಥವಾ ಬೆಳವಣಿಗೆ. ಅಜೀರ್ಣ, ಹಸಿವು ಕಡಿಮೆಯಾಗುವುದು, ಹೊಟ್ಟೆಯಲ್ಲಿ ಕಸಿವಿಸಿ, ದೇಹತೂಕದಲ್ಲಿ ಗಣನೀಯ ಇಳಿತ. ರಕ್ತಹೀನತೆ, ಆಗಾಗ ಕಾಣುವ ಸೋಂಕುಗಳು, ಮೊಳೆ ನೋವು, ರಕ್ತಸ್ರಾವದ ಕುರುಹುಗಳು.
ಮೂತ್ರಶಾಸ್ತ್ರಜ್ಞರು
ಕಿಡ್ನಿ ಸ್ಟೋನ್ನಿಂದ (ಮೂತ್ರ ಜನಕಾಂಗದ ಕಲ್ಲು) ಬಳಲುತ್ತಿರುವವರು. ಪ್ರಾಸ್ಟೇಟ್ ಸಮಸ್ಯೆಗಳಿಂದ ಬಳಲುತ್ತಿರುವವರು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರು. ಮೂತ್ರದ ಇತರೆಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವವರು.
ಹೃದ್ರೋಗ ತಜ್ಞರು
• ಹುಟ್ಟಿನಿಂದ ಬರುವ ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರು. ಹೃದಯದ ರುಮ್ಯಾಟಿಕ್ ಕಾಯಿಲೆಯಿಂದ ಬಳಲುತ್ತಿರುವವರು. ಹೃದಯದ ಪರಿಧಮನಿಯ ಕಾಯಿಲೆಯಿಂದ ಬಳಲುತ್ತಿರುವವರು. ಬೈಪಾಸ್ ಅಥವಾ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳು.

ಶಿಬಿರದಲ್ಲಿ ಲಭ್ಯವಿರುವ ಸೇವೆಗಳು : ಸ್ತ್ರೀಯರ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ ಸ್ತ್ರೀಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ತಪಾಸಣೆ
ಇಸಿಜಿ ಪರೀಕ್ಷೆ ಉಚಿತವಾಗಿ ಮಾಡಲಾಗುವುದು ಮತ್ತು ಮಹಿಳೆಯರಿಗೆ ಉಚಿತವಾಗಿ ವ್ಯಾಪ್ ಸ್ಮಿಯರ್, ಮ್ರ್ಯಾಮೋಗ್ರಾಂ ಪರೀಕ್ಷೆ ಮಾಡಲಾಗುವುದು
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೆಚ್ಚಿನ ಕಾಯುವಿಕೆ ಇಲ್ಲದೆ ತಪಾಸಣೆಗೆ ಆದ್ಯತೆ ನೀಡಲಾಗುತ್ತದೆ.
ಮೇಲಿನ ಸಮಸ್ಯೆಗಳಿಂದ ಬಳಲುತ್ತಿರುವವರು ಶಿಬಿರದ ಪ್ರಯೋಜನವನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿ ಹಾಗು ನೋಂದಣಿ ಮಾಡಲು ಕರೆ ಮಾಡಿ : 9886664196: 7022912291
