
ಕಳಸ ಲೈವ್ ವರದಿ
ವಿದ್ಯಾರ್ಥಿಗಳು ಶುಚಿತ್ವದಿಂದ ಏಕಾಗ್ರತೆ ಮತ್ತು ದೈಹಿಕ ಶುಚಿತ್ವದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ರಾಜಗೋಪಾಲ ಜೋಷಿ ಹೇಳಿದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಗ್ರಾಮೀಣ ಅಭಿವೃದ್ಧಿ ಮತ್ತು ಶೈಕ್ಷಣಿಕ ಚಟುವಟಿಕೆಗಳ ಯೋಜನೆಯ ಅಡಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗ ಮತ್ತು ಕಾಲೇಜು ವಿಭಾಗಕ್ಕೆ ಸ್ಯಾನಿಟರಿ ಪ್ಯಾಡ್ ಇನ್ಸೆನಿರೇಟರ್ ಘಟಕವನ್ನು ನೀಡಿ ಮಾತನಾಡಿದರು
ಉಧ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಮಾತನಾಡಿ ಇಂತಹ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ರಫೀಕ್, ಕಾಲೇಜು ಪ್ರಾಂಶುಪಾಲ ಅನಂತಪದ್ಮನಾಭ, ಉಪ ಪ್ರಾಂಶುಪಾಲ ಸುರೇಶ್, ಸಮಿತಿ ಸದಸ್ಯರಾದ ದಿನೇಶ್, ರಿಜ್ವಾನ್, ಶಿಕ್ಷಕರಾದ ಸಂದೇಶ್, ಶಿವಕುಮಾರ ಇದ್ದರು.


