ಕಳಸ ಲೈವ್ ವರದಿ
ಬಜಪೆ: – ನಾಟ್ಯ ಕಲಾಂಜಲಿ ನೃತ್ಯ ಅಕಾಡೆಮಿ ಮುಚ್ಚೂರಿನ ವಿದೂಷಿ ಶ್ರಾವ್ಯ ಕಿಶೋರ್ ಮುಚ್ಚೂರು ಇವರ ನಿರ್ದೇಶನದಲ್ಲಿ ಬಜಪೆ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ನವಂಬರ್ 30 ಕ್ಕೆ ವಿಜಯವಿಠ್ಠಲ ಭಜನ ಮಂದಿರದಲ್ಲಿ ಸಂಜೆ5.00 ರಿಂದ ಕಾರ್ಯಕ್ರಮಗಳು ಆರಂಭ ವಾಗಲಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ ಆಶೀರ್ವಚನ ನೀಡಲಿದ್ದು. ಶೆಟ್ಟಿ ಸದನ ಬಜ್ಪೆ ಯ ವರಪ್ರಸಾದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಯ ಮಾಜಿ ಅದ್ಯಕ್ಷರಾದ ದಯಾನಂದ ಕತ್ತಲ್ ಸಾರ್ , ಭರತನಾಟ್ಯ ಗುರು ಶ್ರೀಧರ್ ಹೊಳ್ಳ ಸಹಿತ ಅನೇತ ಗಣ್ಯರು ಮುಖ್ಯ ಅತಿಥಿಗಳಾಗಿರುವರು.
ಭರತನಾಟ್ಯ ಕಾರ್ಯಕ್ರಮದ ಹಿಮ್ಮೇಳನದಲ್ಲಿ
ಹಾಡುಗಾರಿಕೆ :- ವಿದ್ವಾನ್ ಕುತ್ತಿಕೊಲ್ ಉಣ್ಣಿಕೃಷ್ಣನ್ ನಂಬೂತಿರಿ.
ಕೊಳಲು:- ವಿದ್ವಾನ್ ರಾಜಗೋಪಾಲ್ ಕಾಞಂಗಾಡ್.
ಮೃದಂಗ :- ವಿದ್ವಾನ್ ಕಣ್ಣನ್ ಕಾಞಂಗಾಡ್ .
ನಟುವಾಂಗ :- ವಿದೂಷಿ ಶ್ರಾವ್ಯ ಕಿಶೋರ್ ಮುಚ್ಚೂರು
ಇರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.