
ಕಳಸ ಲೈವ್ ವರದಿ
ವಿದ್ಯಾರ್ಥಿಗಳು ‘ಶಿಕ್ಷಣ, ಸ್ವಚ್ಛತೆ ಮತ್ತು ತಂತ್ರಜ್ಞಾನದಲ್ಲಿ ಅರಿವು ಹೊಂದುವ ಮೂಲಕ ಸುಶಿಕ್ಷಿತರಾಗಬೇಕೆಂದು ಎಂದು ಕಾಫಿ ಬೆಳೆಗಾರ ಕೆ.ಸಿ.ಧರಣೇಂದ್ರ ಹೇಳಿದರು.
ಕಳಸ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾಲ್ಲಿ ನಡೆದ ಮೂರು ದಿನಗಳ ರಾಜ್ಯಮಟ್ಟದ ಅಟಲ್ ಟಿಂಕರಿಂಗ್ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶಕರಾಗಿರುವ ಶ್ರೀಮತಿ ಮಂಜುಳಾ ರವರು 2025-26ರ ಅಟಲ್ ಟಿಂಕರಿಂಗ್ನ ಕಾರ್ಯಚಟುವಟಿಕೆಗಳ ವಾರ್ಷಿಕ ಕ್ಯಾಲೆಂಡರ್ ಅನಾವರಣಗೊಳಿಸಿ. ವಿದ್ಯಾರ್ಥಿಗಳು ವೈಜ್ಞಾನಿಕ ಜ್ಞಾನಗಳನ್ನು ಪ್ರಾಯೋಗಿಕವಾಗಿ ಅನ್ವೇಷಿಸಲು ಕಾರ್ಯಚಟುವಟಿಕೆಗಳು ಸಹಾಯಕ ಎಂದರು.
ಈ ರಾಜ್ಯ ಮಟ್ಟದ ಕಾರ್ಯಗಾರಕ್ಕೆ ವೀಕ್ಷಕರಾಗಿ ಆಗಮಿಸಿದ ರಾಜ್ಯ ಪೆÇ್ರೀಗ್ರಾಮಿಂಗ್ ಅಧಿಕಾರಿ ಶ್ರೀಮತಿ ಶ್ರೀಲತಾ ಕೋಟೆ ಮಠ, ಶಿಕ್ಷಣ ಸಮಾಲೋಚಕರು ಶ್ರೀಮತಿ ನಮಿತ ರಾವ್, ಶಿಕ್ಷಣ ಸಮಾಲೋಚಕರು ಶ್ರೀಮತಿ ವೀಣಾ ಶಶಿಕುಮಾರ್ ಉಪಸ್ಥಿತರಿದ್ದು ಕಾರ್ಯಗಾರ ದ್ವೇಯೋದ್ದೇಶಗಳನ್ನು ತಿಳಿಸಿದರು. ಕಾರ್ಯಗಾರದ ಔಚಿತ್ಯದ ಬಗ್ಗೆ ಜಿಲ್ಲಾ ನೋಡೆಲ್ ಅಧಿಕಾರಿಯಾಗಿರುವ ಶ್ರೀಮತಿ ಭಾಗಿ ಬಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಸನ ನೋಡಲ್ ಅಧಿಕಾರಿಯಾಗಿರುವ ಶ್ರೀಮತಿ ಪ್ರೇಮ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಮಹಮ್ಮದ್ ರಫೀಕ್ ವಹಿಸಿಕೊಂಡಿದ್ದರು. 35 ಶಿಕ್ಷಕ ಶಿಬಿರಾರ್ಥಿಗಳು ಈ ಕಾರ್ಯಗಾರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರನ್ನು ಉಪಪ್ರಾಂಶುಪಾಲರಾದ ಶ್ರೀಯುತ ಸುರೇಶ ಇವರು ಸ್ವಾಗತಿಸಿದರು. ಶಿಕ್ಷಕರಾದ ಚಿಂತನ್ ಕಾರ್ಯಕ್ರಮ ನಿರೂಪಿಸಿದರು, ಶಾಲಾ ನೋಡೆಲ್ ಶಿಕ್ಷಕರಾದ ಶ್ರೀ ಸಂದೇಶ್ ಇವರು ವಂದಿಸಿದರು.


