oplus_262144


ಕಳಸ ಲೈವ್ ವರದಿ
(ಸುದೀಶ್ ಸುವರ್ಣ)
ಬೆಂಕಿಯಲ್ಲಿ ಬೆಂದು ಕೆಂಪು ಬಣ್ಣಕ್ಕೆ ತಿರುಗಿದ ಕಬ್ಬಿಣ, ಅದರ ಮೇಲೆ ಪೆಟ್ಟಿನ ಮೆಲೆ ಪೆಟ್ಟು ಹಾಕಿ ತಮಗಿಷ್ಟದಂತೆ ಸಲಕರಣೆ ರೂಪಿಸುವ ಸಂಚಾರಿ ಕಮ್ಮಾರರ ಕೈಚಳಕದಿಂದ ಕುಡುಗೋಲು, ಕೊಡಲಿ, ಪಿಕಾಸಿ, ಕತ್ತಿ, ಗುದ್ದಲಿ, ಚಾಕು ತಯಾರಿಸುವುದಲ್ಲದೆ ಹಳೆಯದನ್ನು ಹರಿತಗೊಳಿಸುವ ಕೆಲಸ ವಲಸಿಗ ಕಮ್ಮಾರರಿಂದ ಕಳಸದಲ್ಲಿ ಭರದಿಂದ ಸಾಗುತ್ತಿದೆ.
ಊರೂರು ಸುತ್ತಿ ರೈತರ ಅವಶ್ಯಕ ಕೃಷಿ ಉಪಕರಣಗಳನ್ನು ಶರವೇಗದಲ್ಲಿ ಅಚ್ಚುಕಟ್ಟಾಗಿ ತರಾರಿಸಿ ಕೊಡುವ ಸಂಚಾರಿ ಕಮ್ಮಾರರು ಗೇಣು ಹೊಟ್ಟೆಗಾಗಿ ಮಧ್ಯ ಪ್ರದೇಶದಿಂದ ಕರ್ನಾಟಕಕ್ಕೆ ಬಂದು ಅಲ್ಲಲ್ಲಿ ತಮ್ಮ ಬಿಡಾರಗಳನ್ನು ಹೂಡಿ ಜೀವನ ಸಾಗಿಸುತ್ತಾ ಇದೀಗ ಕಳಸದ ಸಂತೆ ಮಾರುಕಟ್ಟೆಯ ಸಮೀಪ ತಾತ್ಕಾಲಿಕ ಕುಲುಮೆಗಳನ್ನು ಹಾಕಿಕೊಂಡು ಕೃಷಿಗೆ ಅಗತ್ಯ ಸಲಕರಣೆಗಳನ್ನು ತಯಾರು ಮಾಡಿಕೊಡುತ್ತಿದ್ದಾರೆ.
ಕುಟುಂಬದಲ್ಲಿ ಮಹಿಳೆಯರು, ಪುರುಷರೆಂಬ ಭೇದವಿಲ್ಲದೆ ಸುತ್ತಗಿ ಎತ್ತಿ ಕಾದ ಕಬ್ಬಿಣಕ್ಕೆ ರೂಪ ಕೊಡುವ ಇವರು ಮಧ್ಯಪ್ರದೇಶದಿಂದ ವಲಸೆ ಬಂದ ಕುಲುಮೆ ಕುಟುಂಬಗಳು ಒಂದಿಷ್ಟು ದಿನ ಇಲ್ಲಿ ಟೆಂಟ್ ಹಾಕಿಕೊಂಡು ರೈತರಿಗೆ ಕೃಷಿಗೆ ಬೇಕಾದ ಪರಿಕರಗಳನ್ನು ಸಿದ್ದಪಡಿಸುತ್ತಾರೆ.ಮಾರಾಟ ಮಾಡಿ ಬರುವ ಹಣದಲ್ಲಿ ವಲಸೆ ಕಮ್ಮಾರರು ತಮ್ಮ ಜೀವನ ನಡೆಸುತ್ತಾರೆ.
ಸಂಚಾರಿ ಜೀವನದಲ್ಲಿಯೇ ತೃಪ್ತಿ ಕಾಣುವ ಕಮ್ಮಾರರು 9 ತಿಂಗಳು ಸಂಚಾರಿ ಜೀವನದಲ್ಲಿಯೇ ಕಾಲ ಕಳೆಯತ್ತೇವೆ.ಒಂದು ಕತ್ತಿಗೆ 800 ರೂ ಅಂದರೆ ಚೌಕಾಶಿ ಮಾಡಿ ವ್ಯಾಪಾರ ಮಾಡುತ್ತಾರೆ.ದಿನಕ್ಕೆ ಎರಡರಿಂದ ಮೂರು ಸಾವಿರ ಸಂಪಾದನೆ ಮಾಡುತ್ತೇವೆ. ಎಂದು ಹೇಳುತ್ತಾರೆ ಕಮ್ಮಾರ ತಾಸೀರ್.


