
ಕಳಸ ಲೈವ್ ವರದಿ
ಕಳಸ ಭಾಗದಲ್ಲಿ ಅಕ್ರಮ ಗೋಕಳ್ಳತನ ಮತ್ತು ಗೋ ಸಾಗಾಣಿಕೆ ತಡೆಗಟ್ಟಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶ್ವಹಿಂದೂ ಪರಿಷತ್ ಬಜರಂಗದಳ ಕಳಸ ಪ್ರಖಂಡ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದೆ.
ಕಳಸ ತಾಲ್ಲೂಕು, ಕಳಸದ ಸುತ್ತಮುತ್ತಲಿನ ಪ್ರದೇಶಗಳಾದ ಬಾಳೆಹೊಳೆ, ಹೊರನಾಡು, ಹಿರೇಬೈಲ್ ಮುಂತಾದೆಡೆಗಳಲ್ಲಿ ಅಕ್ರಮವಾಗಿ ಗೋವುಗಳ ಕಳ್ಳತನ ಮತ್ತು ಗೋ ಸಾಗಾಣಿಕೆ ಮಾಡುತ್ತಿರುವುದು ಸಂಘಟನೆಯ ಗಮನಕ್ಕೆ ಬಂದಿರುತ್ತದೆ. ಕಳ್ಳತನ ಮಾಡಿದ ಗೋವುಗಳನ್ನು ಪಿಕ್ ಅಪ್ ವಾಹನ, ಬೊಲೆರಾ ಮುಂತಾದ ವಾಹನಗಳಲ್ಲಿ ಅಕ್ರಮ ಸಾಗಾಣಿಕೆಯನ್ನು ಮಧ್ಯರಾತ್ರಿ 1-00 ಗಂಟೆಯಿಂದ 5-00 ಗಂಟೆಗೆ ಸಾಗಾಣಿಕೆ ಮಾಡಲಾಗುತ್ತದೆ.
ಆದುದರಿಂದ ತಾವು ದಯಮಾಡಿ ಕಳಸದ ಸುತ್ತಮುತ್ತಲಿನ ಪ್ರದೇಶಗಳಿಂದ ಅಕ್ರಮ ಗೋಕಳ್ಳತನ ಹಾಗೂ ಗೋ ಸಾಗಾಣಿಕೆಯನ್ನು ತಡೆಗಟ್ಟಿ ಅವರ ಮೇಲೆ ಸೂಕ್ತ ಕಾನೂನು ಕ್ರಮವಹಿಸಬೇಕಾಗಿ ಈ ಮೂಲಕ ಕೋರುತ್ತೇವೆ ಇಲ್ಲವಾದಲ್ಲಿ ಗೋಮಾತೆ ರಕ್ಷಣೆಗಾಗಿ ಹಿಂದೂ ಸಂಘಟನೆಯೇ ಕಾರ್ಯಕ್ಕೆ ಇಳಿಯಬೇಕಾಗುತ್ತದೆ ಹಾಗೂ ಈ ಸಮಯದಲ್ಲಿ ಗೋರಕ್ಷಕರಿಗೆ ಉಂಟಾಗಬಹುದಾದ ಅನಾಹುತಗಳಿಂದ ತಮ್ಮ ಠಾಣೆಯೇ ನೇರ ಹೊಣೆಯಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಅಜಿತ್ ಕುಲಾಲ್,ವಿಶ್ವಹಿಂದೂ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಸಂತೋಷ್ ಮೂಲ್ಯ, ತಾಲ್ಲೂಕು ಸಂಯೋಜಕ ಸುಜಿಲ್ ಬೋನಡ್ಕ, ಗೋರಕ್ಷ ಪ್ರಮುಖ್ ದೀಕ್ಷಿತ್ ಇತರರು ಇದ್ದರು.