
CmEKWFNuYXBjaGF0LzEzLjIzLjAuMzggKFJNWDM4NDA7IEFuZHJvaWQgMTQjVS5SNFQyLjFhNDcyN2FfMjQ0ZWVfMjQ0ZWQjMzQ7IGd6aXApIFYvTVVTSFJPT00QvomFrO0B
ಕಳಸ ಲೈವ್ ವರದಿ
ಕನ್ನಡ ಜಾನಪದ ಪರಿಷತ್ ಕಳಸ ಘಟಕ ಹಾಗೂ ಮಹಿಳಾ ಘಟಕದಿಂದ ವರ್ಷದ ಮೊದಲನೆ ಹಬ್ಬ ಹಾಗೂ ರೈತರ ಸುಗ್ಗಿ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.
ಪರಿಷತ್ತಿನ ಸದಸ್ಯರು ಎಳ್ಳು ಬೆಲ್ಲ ಪರಸ್ಪರ ಹಂಚಿಕೊಂಡು ಶುಭಕೋರಿದರು.
ಕಜಾಪ ಅಧ್ಯಕ್ಷ ಅಜಿತ್ ಪ್ರಸಾದ್ ಮಾತನಾಡಿ ಸೂರ್ಯನು ಮಕರ ಸಂಕ್ರಮಣದಿಂದ ತನ್ನ ಮಾರ್ಗ ಬದಲಾಯಿಸಿ ಉತ್ತರ ದಿಕ್ಕಿನ ಕಡೆ ಚಲಿಸುತ್ತಾನೆ.ಪ್ರತೀ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಸೂರ್ಯನು ಪ್ರವೇಶಿಸುತ್ತಾನೆ.ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ.6 ತಿಂಗಳು ಕಾಲ ಉತ್ತರಾಯಣದ ಬಳಿಕ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗಲಿದೆ.ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೆಶಿಸುವ ಸಂಕ್ರಮಣ ಕಾಲವು ಪುಣ್ಯಪ್ರದ ಎಂಬ ನಂಬಿಕೆ ಪ್ರಾಚೀನ ಕಾಲದಿಂದಲೂ ಇದೆ.ಈ ಸಂಕ್ರಾಂತಿ ಹಬ್ಬವು ನಾಡಿನ ಜನತೆಗೆ ಒಳಿತನ್ನು ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ ಹೊಸ ವರ್ಷ ಆರಂಭದಲ್ಲಿ ಬರುವ ಹಬ್ಬ ಇದಾಗಿದ್ದು ಭಾರತದ ಎಲ್ಲಾ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ ಮಹತ್ವ ಒಂದೇ ಆಗಿದ್ದರೂ ಹಲವೆಡೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ.ಸಂಕ್ರಾಂತಿ ಹಬ್ಬದಲ್ಲೂ ನಾವು ಜಾನಪದ ಸೊಗಡನ್ನು ಕಾಣಬಹುದು.ಆಧುನಿಕತೆಯ ಅಬ್ಬರದ ಮಧ್ಯೆಯೂ ಹತ್ತು ಹಲವು ಸಂಪ್ರದಾಯ, ನಂಬಿಕೆ, ಹಬ್ಬ ಹರಿದಿನ, ಆಚರಣೆಗಳು ಜೀವಂತವಾಗಿದೆ.ಈ ಹಬ್ಬ ಹರಿದಿನಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಕಸಾಪ ಜಿಲ್ಲಾ ಸಂಚಾಲಕ ಪಾಂಡುರಂಗ, ಕಜಾಪ ಉಪಾಧ್ಯಕ್ಷ ವಿನಾಯಕ, ಕಾರ್ಯದರ್ಶಿ ಭರತ್ರಾಜ್, ಪ್ರೇಮ್ ಕುಮಾರ್, ಕಲ್ಪನಾ ಅಜಿತ್, ಶರೀಪ್, ಅನಿಲ್, ಅಮಿತ ವಿನಾಯಕ, ಮಂಜುಳಾ, ರಾಧಿಕಾ ಕಿರಣ್, ದಿವ್ಯ, ಸೌಭಾಗ್ಯ, ಪ್ರತಿಮ, ಉಷಾ ಇದ್ದರು.