
ಕಳಸ ಲೈವ್ ವರದಿ
ಕಳಸದ ಎಡದಾಳು ಸಮೀಪದ ಬೋವಿಪಾಲ್ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಹಣ, ಚಿನ್ನ, ಬೆಳ್ಳಿ ಹಾಗೂ ಅಡಿಕೆ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಬೋವಿಪಾಲ್ನ ಸಾಬಿತ್ ಎಂಬುವವರ ಮನೆ ಕಳ್ಳರು ನುಗ್ಗಿದ್ದು, ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯ ಬೀಗವನ್ನು ಮುರಿದು ಗ್ರಾಡ್ರೇಜ್ ನಲ್ಲಿದ್ದ 40 ಸಾವಿರ ಮೌಲ್ಯದ ಚಿನ್ನ ಬೆಳ್ಳಿ, 5500 ರೂ ಹಣ, 17 ಸಾವಿರ ಮೌಲ್ಯದ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


