
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಹಳುವಳ್ಳಿ ಸಮೀಪದ ಗಣಪತಿಕಟ್ಟೆ ಎಂಬಲ್ಲಿ ಚಿರತೆಯೊಂದು ಬಂದು ಗೇಟ್ ಹಾರಿ ಹೋಗುವ ದೃಶ್ಯವು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಹಳುವಳ್ಳಿ ಮುಖ್ಯ ರಸ್ತೆಯಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ಎಂ.ಬಿ ಶೈಲೇಶ್ ರರವ ಮಾಲಿಕತ್ವದ ತೋಟದ ಒಳಗೆ ಸೋಮವಾರದ ರಾತ್ರಿ ಸುಮಾರು 11.30ಯ ಸಮಯಕ್ಕೆ ಚಿರತೆ ಗೇಟ್ ಹಾರಿ ಹೋಗುವ ದೃಶ್ಯವು ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿದೆ.
ಒಂದು ತಿಂಗಳ ಹಿಂದೆ ತೋಟಕ್ಕೆ ಸಿ.ಸಿ.ಕ್ಯಾಮರ ಅಳವಡಿಸಲಾಗಿತ್ತು.ಸೋಮವಾರ ಸಿ.ಸಿ.ಕ್ಯಾಮರ ಪರಿಶೀಲಿಸಿದಾಗ ಚಿರತೆ ಬಂದಿರುವುದು ಕಂಡಿದೆ.ಆದರೆ ಇದು ಹಳುವಳ್ಳಿಯ ಮುಖ್ಯ ರಸ್ತೆಯ ಬಳಿ ಇರುವ ನನ್ನ ಮನೆಯ ಹತ್ತಿರ ಚಿರತೆ ಬಂದಿರುವುದಲ್ಲ.ಮುಖ್ಯ ರಸ್ತೆಯಿಂದ ಎರಡು ಕಿ.ಮೀ ದೂರದಲ್ಲಿರುವ ನನ್ನ ತೋಟಕ್ಕೆ ಬಂದಿರುವುದು ಎಂದು ಸ್ಪಷ್ಟ ಪಡಿಸಿದ ಅವರು ಈ ಬಗ್ಗೆ ಕಳಸ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.



