

ಕಳಸ ಲೈವ್ ವರದಿ
ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಹಾಗೂ ಒಂದೇ ಮನೆಯ ಇಬ್ಬರು ಬಾಲಕರಿಗೆ ಗಾಯವಾದ ಘಟನೆ ಗುರುವಾರ ಹಿರೇಬೈಲಿನ ಮಿಲ್ ಗುಡ್ಡೆ ಎಂಬಲ್ಲಿ ನಡೆದಿದೆ.
ಗಾಯಗೊಂಡವರು ಸಂಜು ಆಟೋ ಡ್ರೈವರ್, ಶ್ರೇಯಸ್ಸ್ ಕುಮಾರ್(10ವ), ಹೇಮಂತ್ ಕುಮಾರ್ (6ವ) ಎಂದು ಗುರುತಿಸಲಾಗಿದೆ.
ಕೆಳಗುಮ್ಮನಖಾನ್ ನ ಒಂದೇ ಮನೆಯ ಇಬ್ಬರು ಬಾಲಕರನ್ನು ಪ್ರತೀ ದಿನ ಆಟೋದಲ್ಲಿ ಹಿರೇಬೈಲು ಸರ್ಕಾರಿ ಶಾಲೆಗೆ ಕಳುಹಿಸಲಾಗುತ್ತಿತ್ತು.ಗುರುವಾರ ಸಂಜೆ ಶಾಲೆಯಿಂದ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಟೂರಿಸ್ಟ್ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿತ್ತು.ಸುದ್ದಿ ತಿಳಿದ ಕೂಡಲೇ ಸ್ಥಳಿಯರು ಗಾಯಗೊಂಡವರನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.ಪರಾರಿಯಾದ ಕಾರನ್ನು ಕಳಸದಲ್ಲಿ ಪೊಲೀಸರು ಹಿಡಿದಿದ್ದಾರೆ.


