

ಕಳಸ ಲೈವ್ ವರದಿ
ಕಳಸ ಜೆಸಿಐ ಸಂಸ್ಥೆಯ 13ನೇ ಅಧ್ಯಕ್ಷರಾಗಿ ಸುಧಾಕರ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಪಟ್ಟಣದ ಆನೆಗುಡ್ಡ ಹೋಮ್ ಸ್ಟೇಯಲ್ಲಿ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಜೆಸಿಐ ವಲಯ 14ರ ಅಧ್ಯಕ್ಷ ವಿಜಯ ಕುಮಾರ್ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು.
ನಿರ್ಗಮಿತ ಅಧ್ಯಕ್ಷ ಶ್ರೀಕಾಂತ್ ಅವರಿಂದ ನೂತನ ಅಧ್ಯಕ್ಷ ಸುಧಾಕರ್ ಅಧಿಕಾರ ಸ್ವೀಕರಿಸಿದರು.ನೂತನ ಸದಸ್ಯರಾಗಿ ಸೇರ್ಪಡೆಗೊಂಡ ರಘು ಹಾಗೂ ಪುರಂದರ ಗೆ ವಲಯ ಉಪಾಧ್ಯಕ್ಷ ಕಿರಣ್ ಯಾದವ್ ಪ್ರಮಾಣ ವಚನ ಬೋಧಿಸಿದರು.
ಕಾರ್ಯದರ್ಶಿಯಾಗಿ ಮುರುಳಿಧರ್, ಖಜಾಂಚಿ ಮಾರುತೇಶ್, ಸಹಕಾರ್ಯದರ್ಶಿ ವಿಜಯ್, ಉಪಾಧ್ಯಕ್ಷರುಗಳಾಗಿ ಮಧುಗೌಡ, ಶಿವಪ್ರಸಾದ್,ಸುನೀಲ್ ಆಚಾರ್ಯ, ಸಂತೋಷ್ ಮೆಣಸೂರು, ಜಯಪ್ರಕಾಶ್, ನಜೀರ್,ನಿದೇರ್ಶಕರಾಗಿ ವಸಂತ, ಸತೀಶ್ ಇವರಿಗೆ ನೂತನ ಅಧ್ಯಕ್ಷ ಸುಧಾಕರ್ ಪ್ರಮಾಣ ವಚನ ಭೋದಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾ ಪಟು ವಿಧುಷಾ ಜೈನ್, ನಿವೃತ ಶಿಕ್ಷಕ ಹಾಗೂ ಜೆಸಿಐ ಪೂರ್ವಾಧ್ಯಕ್ಷ ಸುರೇಂದ್ರ, ಸಮಾಜ ಸೇವಕ ಬ್ರಹ್ಮದೇವ ಅವರನ್ನು ಜೆಸಿಐ ಸಂಸ್ಥೆಯಿಂದ ಗೌರವಿಸಲಾಯಿತು.
ಪೂರ್ವಾಧ್ಯಕ್ಷರಾದ ಅರೋಕ್ ಜಾವಳಿ, ಮಹೇಶ್ ಕೆ.ಸಿ, ಮಹೇಶ್ ಬಿ.ಕೆ, ಪ್ರಶಾಂತ್ ಹೆಚ್.ಆರ್, ಚರಣ್ ಇದ್ದರು.



