
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ನೌಕರರರು ಹಳೆಯ ನಿಶ್ಚಿತ ಪಿಂಚಣಿ ಯೋಜನೆಯ ಮರು ಜಾರಿಗೆ ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಮನವಿ ಸಲ್ಲಿಸಿದರು.
ಕಳಸ ಅಂಚೆ ಕಚೇರಿಗೆ ಬಂದ ನೌಕರರು ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಅಂಚೆ ಡಬ್ಬಿಗೆ ಹಾಕಿದರು.
ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ 6ನೇ ಭರವಸೆಯಂತೆ ದಿನಾಂಕ 1-6-2006ಕ್ಕಿಂತ ಮುಂಚಿತವಾಗಿ ಇದ್ದ ಹಳೆಯ ಪಿಂಚನಿಯನ್ನು ಮರು ಜಾರಿ ಮಾಡುವ ಮೂಲಕ ನಮ್ಮ ನಿವೃತಿ ನಂತರ ನನ್ನ ಮತ್ತು ನನ್ನ ಕುಟುಂಬದ ಭದ್ರತೆಯನ್ನು ತಾವುಗಳು ಒದಗಿಸಲು ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದೇ ಫೆಬ್ರವರಿ 7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನೆಡೆಯುವ ಹಕ್ಕೊತ್ತಾಯ ಸಭೆಗೆ ಮುನ್ನ ಈ ಪತ್ರ ಅಭಿಯಾನವನ್ನು ರಾಜ್ಯ ಸರ್ಕಾರಿ ನೌಕರರರು ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಳಸ ತಾಲೂಕಿನ ವಿವಧ ಇಲಾಖೆಗಳ ಸರ್ಕಾರಿ ನೌಕರರಾದ ವಿನಯಕುಮಾರ್ ಶೆಟ್ಟಿ, ಮಧುಸೂದನ್, ವಿಶುಕುಮಾರ್, ಪುನೀತ್ ಕುಮಾರ್, ದಿನೇಶ್ ಟಿ.ಎಂ, ಮಲ್ಲಿಕಾರ್ಜುನ್, ಶೇಖರಪ್ಪ, ಸೋಮಶೇಖರ್ ಇತರರು ಇದ್ದರು.




