
ಕಳಸ ಲೈವ್ ವರದಿ
ಇಲ್ಲಿಗೆ ಸಮೀಪದ ಕೆಳಭಾಗ ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಬ್ರಹ್ಮರಥೋತ್ಸವ ಮಂಗಳವಾರ ನೆರವೇರಿತು.

ರಥೋತ್ಸವದ ಅಂಗವಾಗಿ ದೇವರಿಗೆ ಪುಣ್ಯಾಹವಾಚನ, ನಚಕಪ್ರಧಾನ ಕಲಶ ಸ್ಥಾಪನೆ, ಆಧಿವಾಸ ಹೋಮ. ಕಲಶಾಭಿಷೇಕ, ಮಹಾಪೂಜೆ. ಉತ್ಸವ ಬಲಿ ನಡೆದ ಬಳಿಕ ಪುರೋಹಿತರ ಮಂತ್ರ ಘೋಷ, ಗಂಟೆ ಜಾಗಟೆಗಳ ಸದ್ದು, ಚೆಂಡೆವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ರಥದ ಬಳಿ ತರಲಾಯಿತು.ರಥದ ಪೂಜಾ ವಿಧಿ ವಿಧಾನಗಳು ನೆರವೇರಿದ ಬಳಿಕ ಶ್ರೀದೇವರ ಮೂರ್ತಿಯನ್ನು ರಥದಲ್ಲಿ ಕೂರಿಸಲಾಯಿತು.
ಈ ಸಂದರ್ಭದಲ್ಲಿ ಭಕ್ತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ರಥಕ್ಕೆ ಎಸೆದು ತಮ್ಮ ಹರssಕೆ ತೀರಿಸಿಕೊಂಡರು.ನಂತರ ರಥದಲ್ಲಿ ಕುಳಿತ ದೇವರಿಗೆ ಮಂಗಳಾರತಿ ನಡೆಸಿ ರಥದ ಚಕ್ರಕ್ಕೆ ಕಾಯಿ ಒಡೆದು ನಂತರ ಬ್ರಹ್ಮ ರಥೋತ್ಸವ ನೆರವೇರಿತು.
ನಡೆಯಿತು.
ಈ ಸಂದರ್ಭದಲ್ಲಿ ಬಾಳೆಹೊಳೆ,ಕಳಸ,ಹಿರೇಬೈಲು,ಹೆಮ್ಮಕ್ಕಿ ಮುಂತಾದ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.



