
ಕಳಸ ಲೈವ್ ವರದಿ
ಕಳಸ ಜೆಸಿಐ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಕಾರಗದ್ದೆ ಹಿರಿಯ ಪ್ರಾಥಮಿಕ ಶಾಲೆ, ತೊಡ್ಲು ಇಲ್ಲಿ ಆಚರಿಸಲಾಯಿತು .

ಕಾರ್ಯಕ್ರಮದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಶ್ರೀಮತಿ ಶಾಲಿನಿ ಇವರನ್ನು ಗ್ರಾಮೀಣ ಮಟ್ಟದಲ್ಲಿ ಇವರ ಸೇವೆಯನ್ನು ಪರಿಗಣಿಸಿ ಸೇವಾ ಪುರಸ್ಕಾರ ಗೌರವವನ್ನು ನೀಡಿ ಸನ್ಮಾನಿಸಲಾಯಿತು.
ಕಳಸ ಜೆಸಿಐ ನ ಅಧ್ಯಕ್ಷರಾದ ಸುಧಾಕರ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ.ಕನಿಷ್ಠ ವೇತನದೊಂದಿಗೆ ಹೆಚ್ಚು ಕೆಲಸ ಮಾಡುವ ಆಶಾ ಕಾರ್ಯಕರ್ತೆಯರ ಗ್ರಾಮೀಣ ಭಾಗದಲ್ಲಿ ಮಾಡುವ ಸೇವೆ ಅನನ್ಯವಾಗಿದೆ. ತಮ್ಮ ಮನೆಗಳು ಸಮುದಾಯಗಳು ಮತ್ತು ಆರೋಗ್ಯ ಕೇಂದ್ರಗಳ ನಡುವೆ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.ಹಳ್ಳಿಗಳಿಗೆ ಆಶಾ ಕಾರ್ಯಕರ್ತೆ ಏಕೈಕ ಆರೋಗ್ಯ ಪೂರೈಕೆದಾರರಾಗಿದ್ದು, ಸಾಂಕ್ರಾಮಿಕ ರೋಗಗಳ ನಡುವೆ ಲಸಿಕೆ ಹಿಂಜರಿಕೆ ಮತ್ತು ಪೂರೈಕೆ ಕೊರತೆಯನ್ನು ಸವಾಲುಗಳನ್ನು ನಿಭಾಯಿಸುತ್ತಾರೆ.ಇಂತಹ ಕೆಲಸವನ್ನು ಓರ್ವ ಮಹಿಳೆಯಿಂದ ಮಾತ್ರ ಸಾಧ್ಯ.ಇಂತಹ ಸೇವೆ ಮಾಡುವ ಸಾಧಕಿಯರನ್ನು ಗುರುತಿಸುವುದು ನಮ್ಮ ಸಂಸ್ಥೆಗೆ ಹೆಮ್ಮೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿ ಭಾನುಪ್ರಕಾಶ್ ಹಾಗು ಶಾಲಾ ಶಿಕ್ಷಕಿ ವಿಲ್ಮಾ, ನಿಕಟ ಪೂರ್ವಾಧ್ಯಕ್ಷರಾದ ಶ್ರೀಕಾಂತ್, ಕಾರ್ಯದರ್ಶಿಗಳಾದ ಮುರುಳಿಧರ ಕಾರ್ಯಕ್ರಮ ನಿರ್ದೇಶಕರಾದ ಶಿವಪ್ರಸಾದ್, ಪೂರ್ವಾಧ್ಯಕ್ಷರಾದ ಮಹೇಶ್ ವಿವಿಧ ವಿಭಾಗಗಳ ಅಧಿಕಾರಿಗಳಾದ ವಿಜಯ್, ನಜೀರ್, ಜಯಪ್ರಕಾಶ್, ಶಿವಪ್ರಸಾದ್ ಇದ್ದರು.


