

ಕಳಸ ಲೈವ್ ವರದಿ
ತಾಲ್ಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಗ್ರಾಮ ಸಭೆಯನ್ನು ನಡೆಸಲಾಯಿತು.

ಕಳಸ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ ಮಾತೆಯರಿಗೆ ಅನಾದಿ ಕಾಲದಿಂದಲೂ ನಮ್ಮ ಸನಾತನ ಸಂಸ್ಕøತಿಯಲ್ಲಿ ವಿಶೇಷ ಗೌರವ ಮನ್ನಣೆ ಪೂಜ್ಯನೀಯ ಭಾವನೆ ಇದೆ.ಇಂದಿಗೂ ಅದೇ ಗೌರವ ನಮ್ಮ ಸಮಾಜ ಹೆಣ್ಣು ಮಕ್ಕಳಿಗೆ ಕೊಡುತ್ತಿದೆ..ಆದರೆ ನಾವು ಹೆಣ್ಣು ಮಕ್ಕಳು ನಮಗೆ ನೀಡಿದ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳದೇ ನಮ್ಮ ಮಾತು,ನಡತೆ ಒಂದಕ್ಕೊಂದು ಪೂರಕವಾಗಿ ಕಾಪಾಡಿಕೊಂಡು ಹೋದಾಗ ಎಲ್ಲರೂ ಗೌರವಭಾವನೆಯಿಂದ ನಡೆಸಿಕೊಳ್ಳುತ್ತಾರೆ.ನಾವು ಹೆಣ್ಣುಮಕ್ಕಳು ಸುಸಂಸ್ಕೃತ ಜೀವನ ನಡೆಸಿದಾಗ ನಮ್ಮ ಕುಟುಂಬ,ನಮ್ಮ ಸುತ್ತ ಮುತ್ತ,ಗ್ರಾಮ ಸಂಸ್ಕಾರಯುತವಾಗಿ ಇರಲು ಸಾಧ್ಯ.ನಮಗೆ ಎಂಥಹ ಆರ್ಥಿಕ ಜ್ಞಾನ ಇದೆ ಎಂದರೆ,ನಮ್ಮ ಮನೆಯೊಳಗಿಂದ ಹಿಡಿದು,ಇಡೀ ದೇಶದ ಆರ್ಥಿಕ ವ್ಯವಸ್ಥೆ ಮುನ್ನೆಡಿಸುತ್ತಿರುವವರು ಹೆಮ್ಮೆಯ ಮಹಿಳೆ.ನಮ್ಮ ದೇಶದ ಪ್ರಥಮ ಪ್ರಜೆಯಿಂದ ಗ್ರಾಮದ ಪ್ರಥಮ ಪ್ರಜೆಯವರೆಗೂ ಇಂದು ಮಹಿಳೆಯರು ಅತ್ಯಂತ ಆಡಳಿತ ನಡೆಸುವ ವಿವೇಚನೆ ನಮಗೆ ದೇವರು ನೀಡಿದ ಶಕ್ತಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ರವೀಂದ್ರ, ವಕೀಲೆ ಮಾಲತಿ ರಾವ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ಪಿ ಗಿರೀಶ್, ಮಾಲತಿ ರಾವ್ ಇತರರು ಇದ್ದರು.


