ಕಳಸ ಲೈವ್ ವರದಿ
ನಿರ್ಮಣ ಹಂತದ ಕಟ್ಟಡದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ.
ಮೃತ ಪಟ್ಟ ವ್ಯಕ್ತಿ ಪಶ್ಚಿಮ ಬಂಗಾಳದ ಸುಭಾರ್ನ ಸಿಂಗ್ ಸರ್ದಾರ್(29)ಎಂದು ಗುರುತಿಸಲಾಗಿದೆ.
ಕಳಸ ಪಟ್ಟಣ ಮುಖ್ಯ ರಸ್ತೆಯ ದೇವಸ್ಥಾನದ ಸಮೀಪ ನಿರ್ಮಾಣ ಹಂತದಲ್ಲಿರುವ ಅಪಾರ್ಟ್ ಮೆಂಟ್ ಕಟ್ಟದಲ್ಲಿ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ.ಕೂಡಲೆ ಕಳಸ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.ಅಷ್ಟೊತ್ತಿಗಾಗಲೆ ವ್ಯಕ್ತಿಯು ಮೃತ ಪಟ್ಟಿದ್ದಾನೆ.
ಮೃತ ವ್ಯಕ್ತಿಯ ಮೃತ ದೇಹವನ್ನು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
