oplus_0

ಕಳಸ ಲೈವ್ ವರದಿ
ಕಳಸ ಭದ್ರಾ ನದಿಯ ವಶಿಷ್ಠ ತೀರ್ಥ ಸಮೀಪ ರಾಜಸ್ಥಾನ ಮೂಲದ ಇಬ್ಬರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಮೃತರಾದವರು ಜಗದೀಶ್(23) ಚೋಟಾ ಸಿಂಗ್(23) ಎಂದು ಗುರುತಿಸಲಾಗಿದೆ.
ರಾಜಸ್ಥಾನದ ಇವರು ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗಳಲ್ಲಿ ಕೆಲಸ ಮಾಡಿಕೊಂಡಿದ್ದ ಹನ್ನೆರಡು ಜನ ಹೋಳಿ ಹಬ್ಬದ ಎರಡು ದಿನದ ರಜೆಯಲ್ಲಿ ಕಳಸ ಕಡೆ ಪ್ರವಾಸಕ್ಕೆ ಬಂದಿದ್ದಾರೆ. ಶನಿವಾರ ಕಳಸಕ್ಕೆ ಬಂದವರು ಇಲ್ಲಿ ಸ್ಥಳೀಯ ಪ್ರವಾಸಿ ಕೇಂದ್ರಗಳಿಗೆ ಬೇಟಿ ನೀಡಿ ಭಾನುವಾರ ಬೆಳಿಗ್ಗೆ ಮತ್ತೆ ಬೆಂಗಳೂರು ಕಡೆ ಪ್ರಯಾಣ ಬೆಳೆಸುವಾಗ ವಶಿಷ್ಠ ತೀರ್ಥದಲ್ಲಿರುವ ತೂಗು ಸೇತುವೆಯನ್ನು ನೋಡಲು ಭದ್ರಾ ನದಿಗೆ ಬಂದಿದ್ದಾರೆ.ಸ್ವಲ್ಪ ಜನ ತೂಗು ಸೇತುವೆ ನೋಡಲು ತೂಗು ಸೇತುವೆಯತ್ರ ಹೋದರೆ ಇಬ್ಬರು ಮಾತ್ರ ಸ್ನಾನಕ್ಕೆಂದು ನೀರಿಗೆ ಇಳಿದಿದ್ದಾರೆ.ಆದರೆ ಇಬ್ಬರು ಈಜು ಬರದೆ ಇರುವ ಕಾರಣ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.
ಸ್ಥಳಕ್ಕೆ ಕಳಸ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.ಎಲ್ಲಾ ಹನ್ನೆರಡು ಜನ ಯುವಕರಾಗಿದ್ದು, ಹತ್ತಿರದ ಸಂಭಂದಿಕರೇ ಆಗಿದ್ದಾರೆ.
