oplus_262144

ಕಳಸ ಲೈವ್ ವರದಿ
ಡಾ|ರಾಜ್ ಕನ್ನಡ ಸಂಘ ಕಳಸ ಹಾಗೂ ಕರವೇ(ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಡಾ||ಪುನೀತ್ ರಾಜ್ಕುಮಾರ್ ರವರ 50ನೇ ವರ್ಷ ಹುಟ್ಟುಹಬ್ಬದ ದಿನವನ್ನು ಅಪ್ಪು ಉತ್ಸವವನ್ನಾಗಿ
ಸೋಮವಾರ ಸಂಜೆ ಆಚರಿಸಲಾಯಿತು.
ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಲಾಯಿತು. ಇದೇ ಸಂದರ್ಭದಲ್ಲಿ ಶೌರ್ಯ ವಿಪತ್ತು ತಂಡ ಕಳಸ ಘಟಕದ ಸದಸ್ಯರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ನಂತರ ಶಂಕರ್ ಸಾರಥ್ಯದಲ್ಲಿ ಕೋಟೆಹೊಳೆ ಬ್ರದರ್ಸ್ ಇವರಿಂದ ಕರೋಕೆ ಆರ್ಕೇಸ್ಟ್ರಾ ನಡೆಯಿತು.
ಈ ಸಂದರ್ಭದಲ್ಲಿ ಡಾ|ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಕರವೇ(ಪ್ರವೀಣ್ ಶೆಟ್ಟಿ ಬಣ)ಅಧ್ಯಕ್ಷ ಚೌಡ ನಾಯ್ಕ್, ಗೌರವಾಧ್ಯಕ್ಷ ಶರೀಫ್, ಸಂತೋಷ್, ಅರವಿಂದ್ ಇತರರು ಇದ್ದರು






