
ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ದಿ ಯೋಜನೆ ಬಿ. ಸಿ. ಟ್ರಸ್ಟ್ (ರಿ )ಕಳಸ ತಾಲ್ಲೂಕು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ ) ಬೆಳ್ತಂಗಡಿ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ ) ಚಿಕ್ಕಮಗಳೂರು ಜಿಲ್ಲೆ. ನವಜೀವನ ಸಮಿತಿಗಳು ಕಳಸ ತಾಲ್ಲೂಕು, ಶೌರ್ಯ ವಿಪತ್ತು ನಿರ್ವಹಣಾ ಘಟಕಗಳು ಕಳಸ ತಾಲ್ಲೂಕು. ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಳಸದ ಶ್ರೀ ಮಹಾವೀರ ಭವನದಲ್ಲಿ ನವಜೀವನೋತ್ಸವ ಕಾರ್ಯಕ್ರಮ ನಡೆಯಿತು.
ಕಳಸ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುನಿತಾ ಕುಮಾರಿ ಯವರ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.. ಕಾರ್ಯಕ್ರಮ ದ ವೇದಿಕೆಯಲ್ಲಿ ಶ್ರೀ ಅಜಿತ್ ಪ್ರಸಾದ್ ಪುರೋಹಿತರು ಕೆಳಂಗಡಿ ಕಳಸ, ಶ್ರೀ ಡಾ || ಮಂಜುನಾಥ ಪ್ರಭು. ಶ್ರೀಮತಿ ಕಲ್ಪನಾ ಕೀರ್ತಿಜೈನ್ ಸಂಸೆ. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯೆ ಶ್ರೀಮತಿ ಸುಜಯಾ ಸದಾನಂದ, ಯೋಜನಾಧಿಕಾರಿ ಸುರೇಶ್, ಶೌರ್ಯ ವಿಪತ್ತು ನಿರ್ವಹಣಾ ಘಟಕಗಳು ಕಳಸದ ಮಾಸ್ಟರ್, ಶ್ರೀ ಮಹೇಶ್. ಬಿ. ಕೆ. ಶೌರ್ಯ ವಿಪತ್ತು ನಿರ್ವಹಣಾ ಘಟಕಗಳು ಕಳಸ ತಾಲ್ಲೂಕು ಕ್ಯಾಪ್ಟನ್ ಶ್ರೀ ಅಜಿತ್ ಕುಲಾಲ್. 1808ನೇ ಮಧ್ಯವರ್ಜನಾ ಶಿಬಿರ ಕಳಸ ಉಪಾಧ್ಯಕ್ಷ ಶ್ರೀ ಜನಾರ್ಧನ ಆಚಾರ್, ಪ್ರಗತಿಬಂದು, ಸ್ವ ಸಹಾಯ ಸಂಘಗಳ ಒಕ್ಕೂಟ, ಕೋಟೆಹೊಳೆ ಅಧ್ಯಕ್ಷೆ ಶ್ರೀಮತಿ ಪ್ರತಿಮಾ ಶೆಟ್ಟಿ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನವಜೀವನ ಸದಸ್ಯ ಜಯಚಂದ್ರ ಎಸ್.ಕೆ ಮೇಘಲ್. ನವಜೀವನ ಸದಸ್ಯರ ಮನೆಯವರಾದ ಶ್ರೀಮತಿ ದೀಕ್ಷಾ ಸತೀಶ್ ಪಾನಾರ. ಇವರುಗಳು ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿರುವ ಗಣ್ಯರು ನವಜೀವನ ಸದಸ್ಯರಿಗೆ ಶುಭ ಹಾರೈಸಿ ಅಭಿನಂದಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಒಕ್ಕೂಟ ಪದಾಧಿಕಾರಿಗಳು, ಸದಸ್ಯರು, ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ವಲಯದ ಸೇವಾಪ್ರತಿನಿಧಿಯವರು, ಮುದ್ದು ಪುಟಾಣಿಗಳು, ವಲಯ ಮೇಲ್ವಿಚಾರಕರು ಭಾಗವಹಿಸಿದ್ದರು.ಸೇವಾಪ್ರತಿನಿಧಿ ಅರುಣ್ ಕುಮಾರ್ ಸ್ವಾಗತಿಸಿ. ಶ್ರೀಮತಿ ಉμÁ ಕಾರಗದ್ದೆ ವಂದಿಸಿದರು..






