ಕಳಸ ಲೈವ್ ವರದಿ
ನಾನು ನಿನ್ನ ಜೊತೆ ನೇರ ಮಾತನಾಡಬೇಕು, ನನ್ನನ್ನು ಒಳ್ಳೆಯ ವ್ಯಕ್ತಿಯನ್ನಾಗಿಸು, ಕೆಟ್ಟ ಜನರಿಂದ ನನ್ನನ್ನು ದೂರ ಇಡು ಎಂದು ಕಳಸ ಕಲಶೇಶ್ವರ ದೇವರಿಗೆ ಭಕ್ತನೋರ್ವ ಪತ್ರ ಬರೆದಿರುವ ಘಟನೆ ನಡೆದಿದೆ.
ಕಳಸ ಕಲಶೇಶ್ವರ ದೇವರ ಮತ್ತು ಪರಿವಾರ ದೇವರುಗಳ ಕಾಣಿಕೆ ಹುಂಡಿಯ ಪರ್ಕಾವಣೆ ಬುಧವಾರ ನಡೆದಿದೆ.ಈ ಸಂದರ್ಭದಲ್ಲಿ ತನ್ನ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಭಕ್ತನೋರ್ವ ಪತ್ರವನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿ ಬೇಡಿ ಕೊಂಡಿರುವ ಪತ್ರ ಪತ್ತೆಯಾಗಿದೆ.
ನಾನೊಬ್ಬ ಸುಕ್ಷಮವಾದ ವ್ಯಕ್ತಿ, ನಾನು ಯಾವುದೇ ತರ ಕೆಟ್ಟದನ್ನು ಮಾಡಿಲ್ಲ ಮಾಡುವುದಿಲ್ಲ ಆದರೆ ನೀನು ನನಗೆ ಶಿಕ್ಷೆಯನ್ನು ಕೊಡುತ್ತಿದ್ದಿಯಾ.ನನಗೆ ಅರ್ಥವಾಗಲಿಲ್ಲ ಒಂದು ನನಗೆ ಕೆಟ್ಟ ಕೆಟ್ಟ ಜನರನ್ನು ನೀಡ ಬೇಡ, ನನಗೆ ದುಃಖ ಪಡಿಸಬೇಡ.ನನನ್ನು ಕೆಟ್ಟ ಜನರಿಂದ ದೂರ ಇಡು.
ನನ್ನನ್ನು ಒಳ್ಳೆಯ ವ್ಯಕ್ತಿಯನ್ನಾಗಿಸು.ಒಳ್ಳೆಯ ವಿದ್ಯೆಯನ್ನು ನೀಡು ನನ್ನಿಂದ ಒಬ್ಬರಿಗೆ ಒಳ್ಳೆಯದಾಗಿಸು.ದುಷ್ಟರನ್ನು ನಾಶ ಮಾಡು ನನ್ನನ್ನು ಕಣ್ಣು ತೆರೆದು ನೋಡು.
ದಯವಿಟ್ಟು ನಾನು ಏನೇ ಕೆಟ್ಟದು ಮಾಡಿದರೂ ಕ್ಷಮಿಸು ಇದು ನಿನಗೆ ತಲುಪುತ್ತೆ ಅಂದ ಅಂದುಕೊಂಡಿದ್ದೇನೆ.ಇದಕ್ಕೆ ನನಗೆ ಉತ್ತರ ಬೇಕು ಎಂದು ದೇವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.





