
ಕಳಸ ಲೈವ್ ವರದಿ
ಸ್ಟೋರ್ಟಿಂಗ್ ಕ್ಲಬ್ ಕಳಸ ಇವರ ವತಿಯಿಂದ ಮೂರು ದಿನಗಳ ಕಾಲ ನಡೆದ ತೃತಿಯ ಬಾರಿಯ ಅಹ್ವಾನಿತ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಕಳಸದ ಆದರ್ಶ ರಾಜೇಶ್ ಮಾಲಿಕತ್ವದ ಎ.ಆರ್. ಪ್ರೆಂಡ್ಸ್ ವಿನ್ನರ್ ಆಗಿ ಪ್ರಶಸ್ತಿ ಪಡೆದುಕೊಂಡರೆ ಸುಜಿತ್ ಬೆಳ್ಳ ಮಾಲಿಕತ್ವದ ಪಂಚಜನ್ಯ ರನ್ನರ್ ಆಗಿ ಪ್ರಶಸ್ತಿ ಪಡೆದುಕೊಂಡಿತು.
ಕಳಸ ಕೆಪಿಎಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಆಹ್ವಾನಿತ ಕ್ರಿಕೆಟ್ ಆಟಗಾರರನ್ನು ಒಳಗೊಂಡಿರುವ 16 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಬುಧವಾರ ಸಂಜೆ ನಡೆದ ಪೈನಲ್ ಪಂದ್ಯದಲ್ಲಿ ಎ.ಆರ್.ಫ್ರೆಂಡ್ ವಿನ್ನರ್ ಆಗಿ 2,22,222-00 ರೂ ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರೆ ಪಂಚಜನ್ಯ 1,11,111-00 ರೂ ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರು.
ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪೋರ್ಟಿಂಗ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಮುಸ್ತಫ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಮಾಜಿ ಮಂತ್ರಿಗಳು ರಮನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ತಾ.ಪಂ ಸದಸ್ಯ ಕೆ.ಸಿ.ಧರಣೇಂದ್ರ, ಉಧ್ಯಮಿ ಶೂಕ್ತ ಜಿ ಗೌಡ, ಮಾಜಿ ತಾ.ಪಂ ಅಧ್ಯಕ್ಷ ಎಂ.ಎ.ಶೇಷಗಿರಿ, ಸಿಪಿಐ ತಾಲ್ಲೂಕು ಕಾರ್ಯದರ್ಶಿ ಗೋಪಾಲ ಎನ್.ಶೆಟ್ಟಿ, ಕಾಫಿ ಬೆಳೆಗಾರ ವಿಜಯ ಭಟ್, ಮಾಜಿ ಜಿ.ಪಂ ಸದಸ್ಯ ಯು.ಪಿ.ಇಬ್ರಾಹಿಂ, ವ್ಯವಸ್ಥಾಪಕ ನಿರ್ದೇಶಕ ಇಕ್ಸಾ ರಿಯಾದ್ ಸೌದಿ ಅರೇಬಿಯದ ಮೊಹಮ್ಮದ್ ಇಕ್ಬಾಲ್, ಮಾಜಿ ತಾ.ಪಂ ಸದಸ್ಯ ಮಹಮ್ಮದ್ ರಫೀಕ್ ಇತರರು ಇದ್ದರು.