ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಮರಸಣಿಗೆ ಶ್ರೀ ಮಹಾಲಿಂಗೇಶ್ವರಸ್ವಾಮಿಯವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಇದೇ ತಿಂಗಳ 20 ಹಾಗೂ 21ರಂದು ನಡೆಯಲಿದೆ.
20ರಂದು ಫಲ ಸಮರ್ಪಣೆ, ಪುಣ್ಯಾಹನಾಂದಿ, ಋತ್ವಿಗ್ವರಣೆ, ಪ್ರಸಾದಶುದ್ಧಿ, ಬಿಂಬಶುದ್ಧಿ, ಸಂಜೆ ವಾಸ್ತುರಾಕ್ಷೋಗ್ನಹೋಹ, ವಾಸ್ತುಪೂಜೆ, ಶಯ್ಯಾಕಲ್ಪನೆ ಇತ್ಯಾದಿ ದಿಗ್ಬಲಿ, ಬ್ರಹ್ಮಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ ನಡೆಯಲಿದೆ.
21ರಂದು ಬೆಳಿಗ್ಗೆ ಪ್ರತಿಷ್ಠಾಧಿವಾಸ, ಪೀಠಾಧಿವಾಸ, ರತ್ನನ್ಯಾಸಹೋಮ, ಅಷ್ಟಬಂಧ ಹೋಮ, ಬೆಳಿಗ್ಗೆ 10-45ಕ್ಕೆ ಶ್ರೀ ಸ್ವಾಮಿಯ ಅಷ್ಟಬಂಧ ಸಂಯೋಜನೆ, ಪ್ರಾಣಪ್ರತಿಷ್ಠೆ, ತತ್ವನ್ಯಾಸ, ಜೀವಕುಂಭಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12-30ಕ್ಕೆ ಧಾರ್ಮಿಕ ಸಭೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ವೀರಮಣಿ ಕಾಳಗ ಎಂಬ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
18-4-2025ರಂದು ಸಂಜೆ 4 ಗಂಟೆಗೆ ಮರಸಣಿಗೆ ಸಿದ್ಧಿವಿನಾಯಕ ದೇವಸ್ಥಾನದಿಂದ ಹಸಿರುವಾಣಿ ಹೊರೆ ಕಾಣಿಕೆ ಹೊರಡಲಿದೆ.
26-04-2025ರಂದು ಶ್ರೀ ನಾಗಪ್ರತಿಷ್ಠೆ, ನಾಗಲಮ್ಮ, ರಾಜದೇವತೆ, ಚೌಡಿ, ಒಂಟಿ ಪಂಜುರ್ಲಿ, ಹಾಗೂ ಜೋಡಿ ಭೂತಗಳ ಪುನಃ ಪ್ರತಿಷ್ಠೆ ಇರುತ್ತದೆ ಎಂದು ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ಅಧ್ಯಕ್ಷರು ಮತ್ತು ಟ್ರಸ್ಟಿಗಳು ತಿಳಿಸಿದ್ದಾರೆ.
