
ಕಳಸ ಲೈವ್ ವರದಿ
ಫ್ರೆಂಡ್ಸ್ ಹಿರೇಬೈಲು ಇವರ ಸಾರಥ್ಯದಲ್ಲಿ ಹೆಚ್.ಪಿ.ಎಲ್-ಸೀಸನ್ 4 ಲೀಗ್/ನಾಕೌಟ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್.ಕೆ.ಫ್ರೆಂಡ್ಸ್ ಪ್ರಶಸ್ತಿಯಲ್ಲಿ ತನ್ನ ಮಡಿಲಿಗೇರಿಸಿಕೊಂಡಿದೆ.
ಹಿರೇಬೈಲು ಸಂದೀಪ್ ಅವರ ನೇತ್ರತ್ವದಲ್ಲಿ ಹಿರೇಬೈಲು ಸರ್ಕಾರಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್.ಕೆ.ಫ್ರೆಂಡ್ಸ್ ವಿನ್ನರ್ ಆಗಿ 1 ಲಕ್ಷ ನಗದಿನೊಂದಿಗೆ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರೆ, ರನ್ನರ್ ಆಗಿ ಏಕದಂತ ಕಲ್ಮಕ್ಕಿ ತಂಡವು 50 ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತು.ಇದರೊಂದಿಗೆ ಮೂರನೇ ಸ್ಥಾನವನ್ನು ವಿಜಯ ವಾರಿಯರ್ಸ್ 29 ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನವನ್ನು ರಾಯಲ್ ಕ್ರಿಕೆಟರ್ಸ್ ಹೊರನಾಡು 10 ಸಾವಿರ ನಗದಿನೊಂದಿಗೆ ಟ್ರೋಫಿಯನ್ನು ಪಡೆದುಕೊಂಡಿತು.
ವಿಶೇಷವೆಂಬಂತೆ 40 ವರ್ಷಗಳ ಮೇಲ್ಪಟ್ಟ ಹಿರಿಯ ಆಟಗಾರರಿಗೂ ಇಲ್ಲಿ ಪ್ರತ್ಯೇಕ ಆಟವನ್ನು ನಡೆಸಲಾಗಿತ್ತು.ಇದರಲ್ಲಿ ಹೇಮಾವತಿ ಕ್ರಿಕೆಟರ್ಸ್ ಜಾವಳಿ ಪ್ರಥಮ ಹಾಗೂ ಸಂಸೆ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಬಹುಮಾನ ವಿತರಣಾ ಸಂದರ್ಭದಲ್ಲಿ ಹಿರೇಬೈಲಿನ ಹಿರಿಯ ಕ್ರಿಕೆಟ್ ಆಟಗಾರರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಇಡಕಣಿ ಗ್ರಾ.ಪಂ ಅಧ್ಯಕ್ಷ ರವೀಂದ್ರ ಹೆಮ್ಮಕ್ಕಿ ಸೇರಿದಂತೆ ಸುಂದರೇಶ್ ನರ್ಗಲ್, ತೇಜಸ್ವಿ ಹೆಮ್ಮಕ್ಕಿ, ರಘುನಾಥ್, ನೌಷದ್, ನೀಲಯ್ಯ ಇತರರು ಇದ್ದರು.