ಕಳಸ ಲೈವ್ ವರದಿ
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಏ 30 ರಂದು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಶ್ರೀ ವರ್ಧುತ್ಯುತ್ಸವ ನಡೆಯಲಿದೆ.
1973ರ ಮೇ 5ರಂದು ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲ್ಲಿ ಶ್ರೀ ಆದಿಶಕ್ತಿ ದೇವಿಯ ಪ್ರತಿಷ್ಠೆ, ಶ್ರೀ ಉದ್ಬವ ಗಣಪತಿ ಸ್ವಾಮಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಪುನರ್ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿತ್ತು.
ಆ ಪುಣ್ಯ ದಿನದ ವರ್ಧಂತ್ಯುತ್ಸವವನ್ನು ಏ 30 ರಂದು ಶ್ರೀ ಜಗನ್ಮಾತೆಯ ದಿವ್ಯ ಸನ್ನಿಧಿಯಲ್ಲಿ ವಿವಿಧ ಹೋಮಗಳು ಪಾರಾಯಣ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
ಅಂದು ಕ್ಷೇತ್ರದಲ್ಲಿ ಮಹಾಗಣಪತಿ ಹೋಮ, ಚಂಡಿಕಾ ಹೋಮ, ಲಲಿತಾ ಹೋಮ, ಲಕ್ಷ್ಮೀನಾರಾಯಣ ಹೃದಯ ಹೋಮ, ರಾಮತಾರಕ ಹೋಮ, ಅನ್ನಪೂರ್ಣ ಮೂಲಮಂತ್ರ ಹೋಮ, ಬಾಲತ್ರಿಪುರ ಸುಂದರಿ ಹೋಮ, ಗಾಯತ್ರಿ ಹೋಮ, ನವಗ್ರಹ ಹೋಮ, ರುದ್ರಹೋಮ, ವೇದ ಪಾರಾಯಣ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7 ರಿಂದ 8.30 ತನಕ ನಾಟ್ಯ ಮಯೂರಿ ವಿದುಷಿ ಶ್ರೀಮತಿ ಲಕ್ಷ್ಮೀಗುರುರಾಜ್ ಇವರ ಶಿಷ್ಯೆ ವಿದುಷಿ ಕುಮಾರಿ ಅರ್ಪತಾ ಹೆಗಡೆ ಉಡುಪಿ ಇವರಿಂದ ಭರತನಾಟ್ಯ ನಡೆಯಲಿದೆ ಎಂದು ಕ್ಷೇತದ್ರ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.


