
ಕಳಸ ಲೈವ್ ವರದಿ
ಜಗದೀಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೇ 100 ಫಲಿತಾಂಶ ಬಂದಿದೆ.
ಇಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಧನ್ಯ ಜಿ ಗೌಡ 616 ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಶ್ರೇಯ ಆರ್ ಪೂಜಾರಿ( 615) ಅಂಕ ಗಳಿಸಿ ತಾಲ್ಲೂಕಿನಲ್ಲಿ ದ್ವಿತೀಯ ಸ್ಥಾನದಲ್ಲಿ ಇದ್ದಾರೆ.
ಉಳಿದಂತೆ ದಿಗಂತ್ ಪಿ(613), ಆತ್ಮೀಯ ಹೆಚ್.ಪಿ(612), ಅನ್ವಿತಾ ಕೆ.ಎಸ್(610), ಶಜ್ಞಾ(608), ಶ್ರುತಿ ಜಿ(608), ಮಾನ್ವಿ ವಿ ಶೆಟ್ಟಿ(606) ಅತೀ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಅತ್ಯುನ್ನತ ಶ್ರೇಣಿಯಲ್ಲಿ 33, ಪ್ರಥಮ ಶ್ರೇಣಿಯಲ್ಲಿ 20, ದ್ವಿತೀಯ ಶ್ರೇಣಿಯಲ್ಲಿ12 ಹಾಗೂತೃತೀಯ ಶ್ರೇಣಿಯಲ್ಲಿ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.