ಕಳಸ ಲೈವ್ ವರದಿ
ಪಹಲ್ಗಾಮ್ ದಾಳಿಗೆ ಪ್ರತಿಕ್ರೀಯೆಯಾಗಿ ಭಾರತವು ನಡೆಸಿದ ಅಪರೇಷನ್ ಸಿಂಧೂರ್ ದಾಳಿಯಲ್ಲಿ ಪಾಲ್ಗೊಂಡ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳುವಳ್ಳಿ ದಂದಾಡಿ ನಿವಾಸಿ ಬಿಎಸ್ಎಫ್ ಎ.ಎಸ್.ಐ ಯೋಧರಾದ ರಾಜಪ್ಪ ಬಿ ಟಿ ಅವರಿಗೆ ಜೂನ್ 11(ನಾಳೆ) ಕಳಸ ಗ್ರಾಮ ಪಂಚಾಯಿತಿ ಹಾಗೂ ಕಳಸ ತಾಲ್ಲೂಕಿನ ಸಮಸ್ಥ ಸಾರ್ವಜನಿಕರ ಪರವಾಗಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ರಾಜಪ್ಪ ಅವರು ಅಪರೇಷನ್ ಸಿಂಧೂರ್ ದಾಳಿಯಲ್ಲಿ ಗಾಯಗೊಂಡಿದ್ದು, ವೈದ್ಯಕೀಯ ರಜೆಯ ಮೇರೆಗೆ ಹುಟ್ಟೂರಿಗೆ ಅವರು ನಾಳೆ ಆಗಮಿಸಿಲಿದ್ದಾರೆ.
ನಾಳೆ ಬೆಳಿಗ್ಗೆ 10:30ಗೆ ಕಳಸ ಕೆಪಿಎಸ್ ಪ್ರೌಢ ಶಾಲಾ ಆವರಣದಲ್ಲಿ ಕಳಸ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘಟನೆಗಳಿಂದ ಗೌರವ ಸಮರ್ಪಣೆ ನಡೆಯಲಿದ್ದು, ನಂತರ ತೆರೆದ ವಾಹನದಲ್ಲಿ ಕಲಶೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮುಖಾಂತರ ಕರೆ ತಂದು ಮನೆಗೆ ಕಳುಹಿಸಲಾಗುತ್ತದೆ.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಭಾಗವಹಿಸುವಂತೆ ಕಳಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ, ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕೇಳಿಕೊಂಡಿದ್ದಾರೆ.
