
ಕಳಸ ಲೈವ್ ವರದಿ
ಅಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ಪಾಲ್ಗೊಂಡು ಗಾಯಗೊಂಡು ತವರಿಗೆ ಮರುಳಿದ ಕಳಸ ತಾಲ್ಲೂಕಿನ ಹಳುವಳ್ಳಿ ದಂದಾಡಿಯ ಬಿಎಸ್ಎಫ್ ಎಎಸೈ ಯೋಧ ರಾಜಪ್ಪ ಬಿ.ಟಿ ಅವರಿಗೆ ಕಳಸ ತಾಲ್ಲೂಕಿನಲ್ಲಿ ಅದ್ಧೂರಿ ಸ್ವಾಗತದೊಂದಿಗೆ ಗೌರವವನ್ನು ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ತಾನು ಒಂದು ವರ್ಷದಿಂದ ಕೂಡಿಟ್ಟ ಪಾಕೆಟ್ ಮನಿಯನ್ನು ಯೋಧನಿಗೆ ಕೊಟ್ಟು ಗಮನ ಸೆಳೆದಿದ್ದಾನೆ.
ಹುಟ್ಟೂರ ಯೋಧನಿಗೆ ಒಂದೆಡೆ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ವಿವಿಧ ಇಲಾಖೆಗಳು ಗೌರವ ಸಮರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಕಳಸ ಪ್ರಬೋಧಿನಿ ವಿದ್ಯಾಕೇಂದ್ರದ ಐದನೇ ತರಗತಿ ವಿದ್ಯಾರ್ಥಿ ಅಭಿನವ್ ಒಂದು ವರ್ಷದಿಂದ ಕೂಡಿಟ್ಟ ಪಾಕೆಟ್ ಮನಿಯನ್ನು ಕೊಟ್ಟು ದೇಶದ ಸೈನಿಕರ ಬಗ್ಗೆ ಗೌರವ ತೋರಿಸಿದ್ದಾನೆ.
ತನ್ನ ಶಿಕ್ಷಕರೊಂದಿಗೆ ವೇದಿಕೆಗೆ ಬಂದ ವಿದ್ಯಾರ್ಥಿ ಮುಚ್ಚಿದ ಲಕೋಟೆಯಲ್ಲಿ ಹಣವನ್ನು ಇಟ್ಟು ಯೋದ ರಾಜಪ್ಪನವರ ಕೈಗಿಟ್ಟು ದೇಶ ಸೇವೆ ಮಾಡುವ ನಮ್ಮ ಸೈನಿಕರ ಮೇಲಿನ ಅಭಿಮಾನವನ್ನು ತೋರಿಸಿದ್ದಾನೆ.ಈ ವಿದ್ಯಾರ್ಥಿಗಿದ್ದ ದೇಶಾಭಿಮಾನ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
