
ಕಳಸ ಲೈವ್ ವರದಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ ಇಲ್ಲಿ ಪ್ರಥಮ ವರ್ಷದ ಯಾವುದೇ ಪದವಿಗೆ ಪ್ರವೇಶ ಬಯಸುವ ಆರ್ಥಿಕವಾಗಿ ಅನಾನುಕೂಲ ಇರುವ ಎಲ್ಲಾ ವಿದ್ಯಾರ್ಥಿಗಳಿಗೆ ದಾಖಲಾತಿಯ ಸಂಪೂರ್ಣ ಶುಲ್ಕವನ್ನು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಹಿತ್ತಲುಮಕ್ಕಿ ರಾಜೇಂದ್ರ ಅವರು ಭರಿಸಲು ಮುಂದಾಗಿದ್ದಾರೆ.
ಈವರೆಗೂ ಪ್ರವೇಶಾತಿ ಪಡೆಯದ ಅರ್ಹ ಅಭ್ಯರ್ಥಿಗಳು ಈ ಸೌಲಭ್ಯ ಪಡೆಯಲು ಕಾಲೇಜಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಕಾಲೇಜಿನ ಪ್ರಾಂಶುಪಾಲರ ದೂರವಾಣಿ ಸಂಖ್ಯೆ ೯೮೪೪೨೪೭೩೯೮ ಗೆ ಸಂಪರ್ಕಿಸ ಬಹುದಾಗಿದೆ.
ಕಾಲೇಜಿನಲ್ಲಿ ವ್ಯಾಸಂಗಕ್ಕೆ ಲಭ್ಯವಿರುವ ಕೋರ್ಸ್ ಗಳ ವಿವರ:
ಬಿ.ಎ., ಬಿ.ಕಾಂ ಮತ್ತು ಬಿ.ಸಿ.ಎ.
ವಿಶೇಷ ಸೂಚನೆ: ಕಳಸ ಪಟ್ಟಣದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿನಿಯರಿಗೆ ಸರ್ಕಾರದ ಉಚಿತ ಹಾಸ್ಟೆಲ್ ಸೌಲಭ್ಯ ಇರುತ್ತದೆ .
ಮನವಿಗೆ ಸ್ಪಂದಿಸಿ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕವನ್ನು ಪಾವತಿಸುತ್ತಿರುವ ಸಿ.ಡಿ.ಸಿ ಕಾರ್ಯಾಧ್ಯಕ್ಷರಾದ ಶ್ರೀಯುತ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ಅವರಿಗೆ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.