
ಕಳಸ ಲೈವ್ ವರದಿ
ಕಳಸ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಕಾಲೇಜು ಕ್ರೀಡಾಂಗಣವನ್ನು ತಾಲ್ಲೂಕು ಕ್ರೀಡಾಂಗಣವನ್ನಾಗಿ ಮಾಡಲು ಹೊರಟಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈ ನಡೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ ತೀವವಾಗಿ ವಿರೋಧಿಸುತ್ತದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ಸಂಘಟನಾ ಕಾರ್ಯದರ್ಶಿ ರಮೇಶ್ ಕೆಳಗೂರು ತಿಳಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಳಸ ತಾಲೂಕಿನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲಾ/ಕಾಲೇಜು ಆಟದ ಮೈದಾನವನ್ನು ತಾಲೂಕು ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕರ್ನಾಟಕದ ಪಬ್ಲಿಕ್ ಶಾಲೆ ಅಭಿವೃದ್ಧಿ ಸಮಿತಿಯ ಸಭೆಯನ್ನು ತಮ್ಮ ಆದೇಶದಲ್ಲಿ ತಿಳಿಸಿದೆ.
ಈ ನಡೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ ತೀವವಾಗಿ ವಿರೋಧಿಸುತ್ತದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮತ್ತು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಇಚ್ಛಾಶಕ್ತಿ ಬೇಕು ಅದರೊಂದಿಗೆ ದೂರದೃಷ್ಟಿ ಬೇಕು ನಾವು ನಮ್ಮ ಹೆಜ್ಜೆಗಳನ್ನು ಶತಮಾನಕ್ಕೆ ಹಿಂದೆ ಚಲಿಸುವುದಲ್ಲ ಮುಂದೆ ಸಾಗಬೇಕು ಪ್ರಸ್ತುತ ಇರುವ ಕ್ರೀಡಾಂಗಣ ೨೦೦ ಮೀ ಸುತ್ತಳತೆಯ ಕ್ರೀಡಾಂಗಣ ಕಳಸದಲ್ಲಿ ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭವಿಷ್ಯದ ಕ್ರೀಡಾಪಟುಗಳು ಇರುವಾಗ ಅವರಿಗೆ ವೇದಿಕೆ ಒದಗಿಸುವ ಬದಲು ಕ್ರೀಡಾ ಇಲಾಖೆ ಅಧಿಕಾರಿಗಳು ಕ್ರೀಡಾಪಟುಗಳ ಪ್ರತಿಭೆಗಳನ್ನು ಕೊಲ್ಲುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಇರಲಿ ದೇಶ ಹಾಗೂ ರಾಜ್ಯದಲ್ಲಿ ಇರಲಿ ಚಾಲನೆಯಲ್ಲಿರುವುದು ೪೦೦ ಮೀ ಸುತ್ತಳತೆಯ ಕ್ರೀಡಾಂಗಣ ಕ್ರೀಡೆಗೆ ಅದರದೆ ಆದ ನಿಯಮಾವಳಿ ಇದೆ ಅದನ್ನು ಕ್ರೀಡಾ ಅಧಿಕಾರಿಗಳು ಗಾಳಿಗೆ ತೂರಿ ಅವರ ಇಷ್ಟದಂತೆ ಅವರ ನಡೆಯಾಗಿದೆ. ಭೂಮಿ ಲಭ್ಯ ಇರುವಾಗ ೪೦೦ ಮೀ ಸುತ್ತಳತೆಯ ಕ್ರೀಡಾಂಗಣ ಮಾಡಲು ಇವರಿಗೆ ಏಕೆ ಸಾಧ್ಯವಿಲ್ಲ. ಈ ಬಗ್ಗೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ವಿರೋದಿಸಬೇಕೆಂದು ನಾವು ಅವರಲ್ಲಿ ಮನವಿ ಮಾಡುತ್ತೇವೆ.
ಶಾಲಾ,ಕಾಲೇಜು ಕ್ರೀಡಾಂಗಣವನ್ನು ಸಾರ್ವಜನಿಕ ಕ್ರೀಡಾಂಗಣ ಮಾಡಿದರೆ ಮಕ್ಕಳ ಶೈಕಣಿಕ ಚಟುವಟಿಕೆಗೆ ಅಡ್ಡಿಯಾಗುತ್ತದೆ. ಸಾರ್ವಜನಿಕ ರಾಜಕೀಯ ಸಮಾವೇಶ ಕಾರ್ಯಕ್ರಮ, ಅದ್ಧೂರಿ ಸಮಾರಂಭ ಇವೆಲ್ಲವೂ ಮುಕ್ತವಾಗಿ ಇನ್ನೂ ಮುಂದೆ ಇದೇ ಕ್ರೀಡಾಂಗಣದಲ್ಲಿ ನಡೆಯಲು ಯಾರ ಅಪ್ಪನೆಯೂ ಬೇಕಾಗಿಲ್ಲ. ನ್ಯಾಯಾಲಯವು ಸಹ ಸಾರ್ವಜನಿಕ ಕ್ರೀಡಾಂಗಣ ಎಂದು ಘೋಷಿಸಲು ಪಟ್ಟರೆ ಎಲ್ಲಾ ಕಾರ್ಯಕ್ರಮಗಳಿಗೆ ಅನುಮತಿ ಸಮ್ಮತಿಸುತ್ತದೆ ಸಾರ್ವಜನಿಕರು ಯಾರು ಯಾವ ಕಾರ್ಯಕ್ರಮ ಬೇಕಾದರೂ ಇಲ್ಲಿ ಮಾಡಬಹುದು ಅಲ್ಲಿಗೆ ಪಕ್ಷದಲ್ಲಿಯೇ ಇರುವ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣದ ಮೇಲೆ ಆಗುವ ದುಷ್ಪರಿಣಾಮವನ್ನು ಕ್ರೀಡಾ ಇಲಾಖೆ ವಹಿಸಿಕೊಳ್ಳುತ್ತದೆಯೇ? ನೂತನ ಕಳಸ ತಾಲ್ಲೂಕಿನ ಭವಿಷ್ಯದ ದೃಷ್ಟಿಯಿಂದ ಜಮೀನು ಲಭ್ಯವಿರುವಾಗಲೇ ಭವಿಷ್ಯದ ಕ್ರೀಡಾಂಗಣ ನಿರ್ಮಾಣ ಆಗಬೇಕು ಎಂಬುವುದು ನಮ್ಮ ಒತ್ತಾಯ. ಇದಕ್ಕೆ ಪೂರಕವಾಗಿ ಬೇಕಾಗುವ ಜಾಗವನ್ನು ಸಹ ಈಗಾಗಲೇ ರಾಜ್ಯ ಕಂದಾಯ ಆಯುಕ್ತರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇವರೆಲ್ಲರ ಗಮನಕ್ಕೆ ತರಲಾಗಿದೆ. ಇದರ ಮಧ್ಯೆ ಇದೀಗ ಕ್ರೀಡಾ ಇಲಾಖೆ ಆತುರದ ನಿರ್ಧಾರ ತೆಗೆದುಕೊಳ್ಳದೆ ಜನಪರವಾಗಿ ಕಳಸ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ತೀರ್ಮಾನ ಕೈಗೊಳ್ಳಲು ಮುಂದಾಗಬೇಕು ಎಂದು ಕೇಳಿಕೊಂಡಿದ್ದಾರೆ.