
ಕಳಸ ಲೈವ್ ವರದಿ
ಇಲ್ಲಿನ ಪ್ರಬೋಧಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.
ಶಾಲೆಯ ಖಜಾಂಚಿ ಬಾಲಕೃಷ್ಣ ಕಾಮತ್ ಶಾಲೆ ನಡೆದು ಬಂದ ಸಾಧನೆ ಬಗ್ಗೆ ಮಾತನಾಡಿದರು. ಹೈದರಾಬಾದಿನ ಇನ್ಸ್ಟಿಟ್ಯೂಟ್ ಆಫ್ ಲಾಂಗ್ವೇಜ್ ಮ್ಯಾನೇಜ್ಮೆಂಟ್ ( p) ಲಿಮಿಟೆಡ್ ನ ಸಂಯೋಜಕರಾದ ಶ್ರೀ ಗಣೇಶ್ ಇವರು ಮಕ್ಕಳೊಂದಿಗೆ ಇಂಗ್ಲಿಷ್ ಮಾತನಾಡುವ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಹಾಗೂ ಇಂಗ್ಲೀಷ್ ಸಂವಹನ ತರಬೇತುದಾರರಾದ ಕುಮಾರಿ ಜ್ಯೋತಿಕಾ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ನಲ್ಲಿ ಸಂವಹನ ನಡೆಸಿದರು ನಡೆಸಿದರು. ಶಾಲೆಯ ಉಪಾಧ್ಯಕ್ಷರಾದ ಶ್ರೀಯುತ ಗಜೇಂದ್ರ ಗೊರಸು ಕೊಡಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಶಿಕ್ಷಕ ಆನಂದ ಹಾಗೂ ಪೋಷಕರು ಉಪಸ್ಥಿತರಿದ್ದರು.