ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಾಧ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು ಹಿರೇಬೈಲು-ಬಾಳೆಹೊಳೆ ರಸ್ತೆಯ ಚನ್ನಡ್ಲು ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಶುಕ್ರವಾರ ಮದ್ಯಾಹ್ನದ ಸಮಯಕ್ಕೆ ಗುಡ್ಡ ರಸ್ತೆಯ ಮೇಲೆ ಬಿದ್ದಿದೆ.ಪರಿಣಾಮ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ನಂತರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.
ಚನ್ನಡ್ಲು ಪ್ರದೇಶದಲ್ಲಿ ೨೦೧೯ರ ಮಹಾ ಮಳೆಗೆ ಗುಡ್ಡಗಳು ಕುಸಿದು ಸಾಕಷ್ಟು ಮನೆಗಳು ನೆಲಸಮವಾಗಿ ಪ್ರಾಣ ಹಾನಿಯೂ ಸಂಭವಿಸಿತ್ತು.
ಶುಕ್ರವಾರ ಮತ್ತೆ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತವಾಗುತ್ತಿರುವುದರಿಂದ ೨೦೧೯ರ ಕಹಿ ಘಟನೆಗಳು ಮತ್ತೆನೆನಪು ಮಾಡುವಂತಾಯ್ತು.