ಕಳಸ ಲೈವ್ ವರದಿ
ಕಳಸ ಭ|| ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಂಡಲ ಪೂಜೆ ದಿನಾಂಕ 10-07-2025ನೇ ಗುರುವಾರದಂದು ನಡೆಯಲಿದೆ.
ಅಂದು ಬೆಳಿಗ್ಗೆ 7-೦೦ ಗಂಟೆಗೆ ವಿಮಾನಶುದ್ಧಿ, ೨೪ ಕಲಶಾಭಿಷೇಕ, ಮಾನಸ್ತಂಭದಲ್ಲಿ ಚತುರ್ಮಖ ಬಿಂಬಗಳಿಗೆ ಪಂಚಾಮೃತ ಅಭಿಷೇಕ.ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ವಜ್ರಪಂಜರ ಆರಾಧನೆ, ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಕಲಿಕುಂಡ ಆರಾಧನೆ, ಶ್ರೀ ಜ್ವಾಲಾಮಾಲಿನೀ ದೇವಿಯವರಿಗೆ ಮತ್ತು ಶ್ರೀ ಪದ್ಮಾವತಿ ದೇವಿಯವರಿಗೆ ಷೋಡಶೋಪಚಾರ ಪೂಜೆ.
ಮಧ್ಯಾಹ್ನ 2-30ರಿಂದ ಧಾರ್ಮಿಕ ಸಭೆ.ಪಾವನ ಸಾನಿಧ್ಯ ಮತ್ತು ಆಶೀರ್ವಚನ ಆಚಾರ್ಯ ಶ್ರೀ ೧೦೦೮ ಗುಣಭದ್ರನಂದಿಜೀ ಮಹಾರಾಜರು ಮತ್ತು ಸತ್ಸಂಗ ಕಾರ್ಕ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು.
ಚಾತುರ್ಮಾಸ ಕಲಶಗಳ ಹರಾಜು ಪ್ರಕ್ರಿಯೆ ಮತ್ತು ಆಚಾರ್ಯ ಶ್ರೀ ಹಾಗೂ ಸತ್ಸಂಗ ಮತ್ತು ಕಾರ್ಕಳ ಸ್ವಾಮೀಜಿಯವರಿಂದ ಆಶೀರ್ವಚನ, ಸಾಯಂಕಾಲ 4 ಗಂಟೆಯಿAದ ಚಾತುರ್ಮಾಸ ಕಲಶ ಸ್ಥಾಪನೆ ವಿಧಿ ಮತ್ತು ಆಚಾರ್ಯಶ್ರೀ ಹಾಗೂ ಸತ್ಸಂಗದವರಿಗೆ ಶಾಸ್ತçದಾನ, ಪಾದಪೂಜೆ, ಆರತಿ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.
