ಕಳಸ ಲೈವ್ ವರದಿ
ಕಳಸ ತಾಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಳಸ ತಾಲೂಕು ವ್ಯಾಪ್ತಿಯಲ್ಲಿ ೨೦೨೪-೨೫ ನೆ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಶೇ ೮೦% ಮತ್ತು ಅದಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಲಾಯಿತು.
ದ್ವಿತೀಯ ಪಿ.ಯು.ಸಿ ಮುಗಿಸಿರುವ ೭ ವಿದ್ಯಾರ್ಥಿಗಳು ಮತ್ತು ಎಸ್.ಎಸ್.ಎಲ್.ಸಿ ಮುಗಿಸಿರುವ ೧೦ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮೂಡಿಗೆರೆ ಯ ಲ್ಯಾಂಪ್ಸ್ ಸಹಕಾರ ಸಂಘ ದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಆಯ್ಕೆಯಾಗಿರುವ ರಾಮು ಹೆಚ್, ಮತ್ತು ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀನಿವಾಸ ಗೌಡ ಅವರನ್ನು ಸಹ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಸೀತಮ್ಮ ಮಾತನಾಡಿ ಸಮಾಜ ಇಲಾಖೆಯ ಸೌಲಭ್ಯಗಳು ಪ್ರೋತ್ಸಾಹ ಧನ, ಹಾಸ್ಟೆಲ್ ವ್ಯವಸ್ಥೆ ಗಳ ಬಗ್ಗೆ ಮಾಹಿತಿ ನೀಡಿದರು.
ಕೆ.ಪಿ.ಎಸ್ ಶಾಲೆಯ ಶಿಕ್ಷಕರಾದ ಶ್ರೀ ಶಿವಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಮುಂದೆ ಆಯ್ಕೆ ಮಾಡಿಕೊಳ್ಳಬಹುದಾದ ಕೋರ್ಸ್ ಗಳು, ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗದಂತೆ ಕಿವಿಮಾತು ಹೇಳಿದರು.
ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಮುಜೇಕಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಗಣೇಶ್ ಕುಕ್ಕೋಡು, ಸಂಘದ ಖಜಾಂಚಿ ಬಾಲಕೃಷ್ಣ, ಮುಖಂಡರುಗಳಾದ ಜಿ.ಪಿ ಚಂದ್ರು, ಕಸ್ತೂರಿ, ಸತೀಶ್ ಹಿರೇ ಬೈಲು, ಶ್ರೀನಿವಾಸ್ ಹೊರನಾಡು, ಸುರೇಶ್ ಬಿಳಿಗಲ್, ದಿನೇಶ್ , ಸುರೇಶ್ ಕರ್ನಾಳಿ, ಸತೀಶ್ ಒಡ್ಡಿಕಟ್ಟೆ, ಲ್ಯಾಂಪ್ಸ್ ನಿರ್ದೇಶಕರಾದ ನಾಗೇಂದ್ರ, ರವಿಕಿರಣ್, ಸುಧಾಕರ, ರಾಜೇಶ್ ಮಲಗಾರು, ಮೇಘಾನಂದ ಬೇಡಕ್ಕಿ ಕವಿತಾ ಚಂದ್ರು, ಅನ್ನಪೂರ್ಣ ಮುಮ್ಮಗೆ, ರಜನಿ, ಪುಷ್ಪಲತ, ಗಿರಿಜಾ ಬೇಡಕ್ಕಿ, ಅಶ್ವಿನಿ, ರಮ್ಯಾ ಸವಿತಾ ಸ್ವಾಗತಿಸಿ, ಅಶ್ವಿನಿ ಕುಕ್ಕೊಡು, ಶಿಕ್ಷಕಿ ರೇವತಿ ಇದ್ದರು.
