ಕಳಸ ಲೈವ್ ವರದಿ
ಕಳಸ ಶ್ರೀ ಶಕ್ತಿಗಣಪತಿ ೬೭ನೇ ವರ್ಷದ ಶ್ರೀ ಶಕ್ತಿಗಣಪತಿ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಗುರು ಪೂಜಾ ಮಹೋತ್ಸವದ ಶುಭ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮವು ಪ್ರಬೋಧಿನಿ ವಿದ್ಯಾಕೇಂದದ ಶ್ರೀ ಶಕ್ತಿಗಣಪತಿ ಪ್ರತಿಷ್ಠಾನದ ಕಟ್ಟಡದಲ್ಲಿ ದಿನಾಂಕ 27-08-2025ರಿಂದ 02-09-2025ರ ವರೆಗೆ ವಿಜೃಂಭಣೆಯಿAದ ನೆರವೇರಲಿದೆ.
ಅಧ್ಯಕ್ಷರಾದ ಬಾಲಕೃಷ್ಣ ಕಾಮತ್, ಕಾರ್ಯದರ್ಶಿ ರಾಜ್ ಕುಮಾರ್ ಪೈ, ಉಪಾಧ್ಯಕ್ಷರಾದ ಆನಂದ ಕೆ.ಸಿ. ಹಾಗೂ ಸುಜಯ ಸದಾನಂದ, ಸಹ ಕಾರ್ಯದರ್ಶಿಗಳಾದ ಗುರುವಪ್ಪ ಮತ್ತು ಅನಂತ, ನೂತನ ಸಂಚಾಲಕರು, ಸರ್ವ ಸದಸ್ಯರು ಹಾಗೂ ಕಾರ್ಯಕರ್ತ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
