
ಕಳಸ ಲೈವ್ ವರದಿ
ಇಂದಿನಿAದ ಲೇಸ್ ಕುರ್ಕುರೆ ತಿನ್ನುವುದಿಲ್ಲ ಇಂದಿನಿAದ ವ್ಯಾಯಾಮವನ್ನು ಮಾಡುತ್ತೇನೆ , ಉತ್ತಮ ಪುಸ್ತಕಗಳನ್ನು ಓದುತ್ತೇನೆ, ಹಿರಿಯರ ಕೆಲಸದಲ್ಲಿ ಭಾಗಿಯಾಗುತ್ತೇನೆ. ಇಂದಿನಿAದ ಆರೋಗ್ಯಕರ ಆಹಾರವನ್ನು ಹಣ್ಣು ಮತ್ತು ತರಕಾರಿಯನ್ನು ಸೇವಿಸುತ್ತೇನೆ. ಮೊಬೈಲ್ ನೋಡುವುದಿಲ್ಲ ಎಂದು ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿದರು.
ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ನಡೆದ ಶಾಲೆಯ ವಿವಿಧ ಕ್ಲಬ್ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಳಸದ ಆಯುರ್ವೇದ ವೈದ್ಯರಾದ ಮಂಜುನಾಥ ಪ್ರಭು ಸರ್ ಸಿ ವಿ ರಾಮನ್ ವಿಜ್ಞಾನ ಸಂಘದ ವತಿಯಿಂದ ನಡೆದ ” “ಹೃದಯದ ಆರೋಗ್ಯ” ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯಘಾತಕ್ಕೆ ನಮ್ಮ ಕೆಟ್ಟ ಜೀವನ ಶೈಲಿಗೆ ಕಾರಣವಾಗಿದ್ದು, ಜೀವನಶೈಲಿಯನ್ನು ಯಾವ ರೀತಿಯಾಗಿ ಬದಲಾಯಿಸಿಕೊಳ್ಳುವ ಮುಖಾಂತರವಾಗಿ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ‘HEART ಪದದ ವಿಸ್ತರಣೆಯ ಮೂಲಕ ತಿಳಿಸಿದರು.
H – ಆರೋಗ್ಯಕರವಾದ ಆಹಾರ
E – ವ್ಯಾಯಾಮ
A – ಜಂಕ್ ಫುಡ್ ತಿನ್ನುವುದನ್ನು ಕಡಿಮೆ ಮಾಡುವುದು
R – ವಿಶ್ರಾಂತಿ
T – ಹಿತಮಿತವಾದ ಮಾತುಗಾರಿಕೆ
ಮಕ್ಕಳು ಅತಿಯಾಗಿ ಲೇಸ್, ಕುರ್ಕುರೆ ಮೈದಾದಿಂದ ತಯಾರಿಸಿದ ಆಹಾರ ತಿನ್ನುವುದು. ಮೊಬೈಲ್ ಅತಿಯಾಗಿ ಬಳಕೆಯಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಇದನ್ನು ಕಡಿಮೆ ಮಾಡಬೇಕು ಎಂದು ಸವಿಸ್ತಾರವಾಗಿ ಮಕ್ಕಳಿಗೆ ವಿವರಿಸಿದರು.
ಹೃದಯವು ನಮ್ಮ ದೇಹದ ಅವಿಭಾಜ್ಯವಾದ ಅಂಗವಾಗಿದ್ದು ಅದರ ಆರೋಗ್ಯವು ಅತಿ ಮುಖ್ಯ. ದಿನನಿತ್ಯ ಒಳ್ಳೆಯ ಮಾತನಾಡುವುದು ನಗು ಮುಖದಲ್ಲಿ ಇರುವುದು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನೆರೆ ಹೊರೆಯವರೊಂದಿಗೆ ಬಾಂಧವ್ಯದಿAದ ಇರುವುದು ದಿನಕ್ಕೆ 7 ಅಥವಾ 8 ಗಂಟೆಗಳ ನಿದ್ದೆ ಮಾಡಬೇಕು ಎಂದರು.