ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವಸ್ಥಾನ ಸಮೀಪ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಹೊಂಡ ಗುಂಡಿಗಳನ್ನು ಮುಚ್ಚುವುದರ ಮುಖಾಂತರ ತಾತ್ಕಾಲಿಕ ಪರಿಹಾರ ಕಂಡಿದೆ.
ಈ ರಸ್ತೆಯಲ್ಲಿ ಸಾಕಷ್ಟು ದೊಡ್ಡ ಗಾತ್ರದ ಗುಂಡಿಗಳು ಬಿದ್ದಿದ್ದು ಈ ಗುಂಡಿಗಳು ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದ್ದವು. ಕೂಡಲೇ ಗುಂಡಿಗಳನ್ನು ಮುಚ್ಚಿ ಎನ್ನುವ ಒತ್ತಾಯ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು.ಅಲ್ಲದೆ ಸೋಮವಾರವಷ್ಟೇ ಈ ಗುಂಡಿಗಳಿಗೆ ಗಿಡಗಳನ್ನು ನೆಟ್ಟು ಗ್ರಾಮಸ್ಥರು ಅಸಮದಾನವನ್ನು ವ್ಯಕ್ತಪಡಿಸಿದ್ದರು.
ಮಂಗಳವಾರ ಈ ಹೊಂಡ ಗುಂಡಿಗಳನ್ನು ಮುಚ್ಚುವುದರ ಮುಖಾಂತರ ದೊಡ್ಡ ಸಮಸ್ಯೆಯನ್ನು ಪರಿಹಾರ ಮಾಡಿದಂತಾಗಿದೆ.ತುರ್ತಾಗಿ ಸಮಸ್ಯೆ ಪರಿಹರಿಸಿದ ಬಗ್ಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
