
ಕಳಸ ಲೈವ್ ವರದಿ
ಕಳಸ ಬೇಡಕ್ಕಿಯ ಶ್ರೀಮತಿ ಗಿರಿಜಾ ಗೋಪಾಲ್ ರವರು ಕನ್ನಡ ಜಾನಪದ ಜಿಲ್ಲಾ ದಶಮಾನೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದರು
ಯಕ್ಷಗಾನ ಕಲಾವಿದರು, ಜಾನಪದ ಶೈಲಿಯ ಅಂಟಿಗೆ ಪಿಂಟಿಗೆ, ಹಲ್ಲಿ ಹಬ್ಬ, ಹಳ್ಳಿ ಔಷಧಿ, ಜಾನಪದ ವಿವಿಧ ಪ್ರಕಾರಗಳ ಬಗ್ಗೆ ಅರಿವು ಇರುವ ಇವರನ್ನು ಬುಧವಾರ ತರೀಕೆರೆಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಮಹಿಳಾ ಜಾನಪದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.